ಮನಸೇ
ಅಳಬೇಡವೆ ಮನಸೇ ಅಳಬೇಡ ಸತ್ತ ನೀನು
ಅತ್ತರೇನು ಪ್ರಯೋಜನ ಹೇಳೇ ಮನಸೇ......
ನೋವಂತೂ ನಿನಗೆ ಹೊಸದಲ್ಲ ಕಣ್ಣೀರು ನಿನಗೇನು ಅಪರಿಚಿತವಲ್ಲ...........
ಏತಕ್ಕೆ ನಿನ್ನ ಕೋಣೆಯಾಸೆ ಬದುಕಲ್ಲಿ ಬಣ್ಣಗಳು ಇನ್ನು ಉಳಿದುಕೊಂಡಿವೆ ಎಂದೂ...........
ಯಾರು ನಿನ್ನ ಅರಿತವರಲ್ಲ ಯಾರಿಗೂ ನಿನ್ನ ನೋವು ಅರ್ಥವಾಗುವುದಿಲ್ಲ...............
ಸತ್ತ ಶವಕೆ ಸಿಂಗಾರವೇಕೆ ಮಾಡಲು ಯತ್ನಿಸುವೆ ನಿನ್ನ ನಟನೆಯ ನಗುವಲ್ಲಿ ಓ ಮನವೇ..............
ಬಾಡಿದ ಹೂ ನೆಲಕ್ಕೆ ಜಾರಿ ನೆಲಸಮವಾದಮೇಲೆ
ಮತ್ತೆ ಗಿಡದ ಮಡಿಲಲ್ಲಿ ಮೊಗ್ಗಾಗಿ ಅರಳುವ ಆಸೆ ಏತಕ್ಕೆ ನಿನಗೆ ಓ ಹುಚ್ಚು ಮನವೇ................
ನೂರಾರು ನೋವುಗಳ ನುಂಗಿ ನುಂಗಿ ನಿನ್ನ ಹೊಟ್ಟೆ ತುಂಬಿರುವುದಲ್ಲವೇ ಮನವೇ ಅದರಲ್ಲಿ ನಲಿವಿನ ಹಸಿವೇಕೆ ನಿನಗೆ ಮನವೇ...............
ಭಾರವಾಗಿದೆ ನಿನ್ನ ದೇಹ ಕುಡಿದ ಕುಗ್ಗಿದ ನಿನ್ನ ಕಣ್ಣೀರ ಹನಿಗಳೊಂದಿಗೆ ಸಪೂರವಾಗುವ ಆಸೆ ಏತಕೆ ನಿನಗೆ ಮತ್ತೆ ಕಣ್ಣೀರ ನಿನ್ನೊಳಗೆ ತಲ್ಲಿ..........
ಜನರು ಕಟ್ಟಿದ ಕಠಿಣವಾದ ಮಾತುಗಳ ಸಮಾಧಿಯಲ್ಲಿ ಶಾಶ್ವತವಾಗಿ ಮಲಗೆ ಮನವೇ ನಿನಗೆ ಈ ಲೋಕ ಉಸಿರಾಡಲು ಬಿಡುವುದಿಲ್ಲ...........
- ಚುಕ್ಕಿ
29 Jun 2017, 09:17 pm
Download App from Playstore: