ಚಿಗುರಿವೆ ಹೊಸ ಕನಸು....

ಸೆಳೆದಿರಲು ನಗುತಲೆ‌ ನೀನು ನನ್ನ ಮನಸು
ಚಿಗುರಿವೆ ಎದೆಯಲಿ ಹೊಸ ಹೊಸ ಕನಸು
ನಯನಗಳು ನಿನ್ನನೆ ನೋಡುತ ನನ್ನ ಮರೆತಿರಲು
ಶಿಲೆಯಾಗಿರುವೆನು ನಾನು ಆಗದೆ‌ ಅಲುಗಾಡಲೂ

ನಿನ್ನ ಭಾವಗಳು ಎಂಥ ಸೊಗಸೆ
ನಿನ್ನಲೇ ನಾನು ಸೇರಿ ಹೋಗುವ ಆಸೆ
ನನ್ನ ತಿರುಗಿ ನೋಡಿ ಕೊಂಚ ಕನಿಕರಿಸೆ
ನನ್ನನೆ‌ ಮರೆತಿರುವೆನು ತಿಳಿಯದೆ ಸಹಕರಿಸೆ
ಕಾಯುತಿರುವೆನು ಸೇರಿ ಹೋಗಲು ನಿನ್ನಲಿ ಸಮ್ಮತಿಸೆ

ಓ ನನ್ನ ಪ್ರಿಯ ಮನಸೆ
ನೀ ನನ್ನ ಬಾಳಿನ ಸವಿಗನಸೆ
ನನ್ನ ಮನಸಿನ ಪ್ರೀತಿಯ ಆದರಿಸೆ
ಸಾಯುತಿರುವೆ ಬಂದು ಉತ್ತರಿಸೆ
ತಿರುಕನ‌ ಕನಸೆಂದಾದರು ಹೇಳಿ‌ ತಿರಸ್ಕರಿಸೆ
ಕಾದಿರುವೆನು ಓ ಮನಸೆ ನೀನಾಗದಿರು ಬರಿ ಕನಸೆ

- ಶ್ರೀಕಾವ್ಯ

30 Jun 2017, 02:54 pm
Download App from Playstore: