ಜನರಿಲ್ಲದ ಜಗತ್ತು........?

ಜನರಿಲ್ಲದ ಜಗತ್ತಿದು ಮುಖವಾಡಹೊತ್ತ
ಮನುಜರ ನೆರಳಿನಿಂದ ಸೃಷ್ಟಿಯಾಗಿರುವುದು...........

ಕಣ್ಣಿದ್ದೂ ನಿಜವನು ಕಾಣಳಾಗದ
ಕುರುಡರೆಲ್ಲರು............
ಸುಳ್ಳಿಗೆ ತಲೆಬಾಗಿ ನಿನ್ನಿಂದೆ ನಾವೆಂದು
ಸುಳ್ಳುಗಳ ಸಾಮ್ರಾಜ್ಯ ಸ್ಥಾಪಿಸಿ ಕಣ್ಣು
ಮುಚ್ಚಿ ನಡೆವರು............

ಹಣವೆಂಬ ದುಷ್ಟನಿಗೆ ಪಟ್ಟಕಟ್ಟಿ
ಜೀವನಕ್ಕೆ ದುಡ್ಡು ಬೆಕೆಂಬುದು ಬಿಟ್ಟು
ದುಡ್ಡಿಗಾಗಿ ಜೀವನವೆಂದು ತಳಿಸಿಕೊಟ್ಟರು
ಮಾನವತ್ವದ ಮೌಲ್ಯ ಮರೆತುಬಿಟ್ಟರು..........

ಜನರಿಲ್ಲದ ಜಗತ್ತಿದು ಸ್ವಾರ್ಥಿಗಳ
ಮೂರ್ತಿಗಳಿಂದ ತುಂಬಿರುವುದು...........
ನಾಟಕಗಳ ಮಜವಿಲ್ಲಿ ಆಡುವವರಿಗೆ
ಆಟ ಆಟ ನೋಡುವವರಿಗೆ ಮನರಂಜನೆಯಾ ಬಾಡೂಟ ನಡುವಲ್ಲಿ ಸಿಕ್ಕ ಅಮಾಯಕರಿಗೆ
ಸತ್ತು ಸಾಯದ ನರಕದಲ್ಲಿನ ಕಾಟ..............

ಜನರಿಲ್ಲದ ಜಗತ್ತಿದು

- ಚುಕ್ಕಿ

30 Jun 2017, 04:50 pm
Download App from Playstore: