ನನ್ನವಳು

( ನನ್ನವಳು )

ಕನಸಲ್ಲಿ ಬಂದವಳು .
ಕಲ್ಪನೆಯ ಕಡಲಿವಳು
ಮಿಂಚಿನಂತೆ ಹೊಳೆಯುವಳು.
ಮುತ್ತಿನಂತಹ ಹೆಣ್ಣಿವಳು. || ನನ್ನವಳು ||

ಅಪ್ಸರೆಯಂತಹ ಮೊಗದವಳು.
ಮೀನಿನಂತಹ ಕಣ್ಣವಳು.
ಹುಣ್ಣಿಮೆ ಚಂದಿರನಂತೆ ಹೊಳೆಯುವ ತುಟಿಯವಳು.
ಮಾತಲ್ಲೆ ಮೈ ಮರೆಸುವಳು.
ನೊವನ್ನೆಲ್ಲ ಧರೆಗೆ ಉರುಳಿಸುವಳು .
||ನನ್ನವಳು||

ಕರುಣೆಯಲ್ಲಿ ತಾಯಿವಳು.
ಹೂವಿನಂತಹ ಮನಸ್ಸವಳು.
ಕಣ್ಣಿಗೆ ಕುಕ್ಕುವಂತಹ ಅಮ್ರುತ ಶಿಲೆಯಲ್ಲಿ ಕೆತ್ತಿದಂತಹ ದಂತದ ಬೊಂಬೆ ಇವಳು.
ಅವಳೆ ನನ್ನವಳು. || ನನ್ನವಳು ||

ನನ್ನ ಕನಸಲ್ಲಿ ಕಂಡಂತಹ ಕಲ್ಪನೆಯ ಪ್ರತಿಬಿಂಬ ಇವಳು .
ನನ್ನ ಭಾವನೆಯಿಂದ ಕವನವಾಗಿ ಹೊರಹೊಮ್ಮಿದ ಚೆಲುವೆ ಇವಳು.
ಅವಳೆ ನನ್ನವಳು.

ಉಸಿರಲ್ಲಿ ಬೆರೆತವಳು .
ನನಗಾಗಿ ಇ ಧರೆಯಲ್ಲಿ ಜನಿಸಿದವಳು.
ನನಗಾಗಿ ಕಾದಿಹಳು... || ನನ್ನವಳು ||


( ಸಂತೋಷ್|| ಜೀತು )

- ಸಂತೋಷ್//ಜೀತು

30 Jun 2017, 06:33 pm
Download App from Playstore: