ಕಳ್ಳ ಚಂದಿರ

ಕದ್ದು ನೋಡುವ ಕಳ್ಳ ಚಂದ್ರ ನಿನ್ನ ತೋರಿ ನನ್ನ ನಚಿಕೆಯನು ಅವನಲ್ಲಿ ಬಚ್ಚಿಟ್ಟುಕೊಂಡನು ನೀನೇ ಅವನ ಪ್ರತಿರುಪವೆಂದು................

ಕೆಂಪುಕೆನ್ನೆಯ ಮುದ್ದಾಡಿ ನನ್ನ ಕಾಂತೀಯ ಕದಿಯಲೆಂದು ನಿನ್ನ ರೂಪದಲ್ಲಿ ತಾನಿಂದು......
ನನ್ನ ಅಂಗೈಯಲ್ಲಿ ನಿಂತು ತಿಳಿಯಾದ ಮಂಜಲ್ಲಿ ಮನಸಾರೆ ನೋಡೆಂದನು ನಿನ್ನನು..........

ಮನಕದ್ದ ಶಶಿಯೋ ನನ್ನ ಕದ್ದ ಒಲವಿನ ಸಂಗಾತಿಯೊ ತಿಳಿಯದಾದೆ ನಾನು ನಿನ್ನನ್ನು ನೋಡುತ್ತಾ ಇರುಳಿನ ಸಮಯದಲ್ಲಿ ಶಶಿಯ ಬೆಳದಿಂಗಳ ಮಡಿಲಲ್ಲಿ..............

- ಚುಕ್ಕಿ

30 Jun 2017, 06:33 pm
Download App from Playstore: