ಹೂವಲ್ಲಿ ಹುಟ್ಟಿದ ಮಕರಂದ

ಹೂವಲ್ಲಿ ಹುಟ್ಟಿದ ಮಕರಂದದ
ಅಂದ ನೀನು ಮನವರಿತ ಗೆಳತಿ...........
ನೂರು ವರುಷಗಳ ನನ್ನ ನಗುವಿನ ಹರುಷ
ನಿನ್ನದಾಗಲಿ ಪ್ರೀತಿಯ ಗೆಳತಿ...........

ನೀನು ಹುಟ್ಟಿದ ಕ್ಷಣದಿಂದ ಇದುವರೆಗೂ
ನೀನಿಟ್ಟ ಪ್ರತಿಯೊಂದು ಹೆಜ್ಜೆ ಲೆಕ್ಕವಿಟ್ಟು ಭೂತಾಯಿಗೆ ನಾ ಹೇಳಲೇ ಧನ್ಯವಾದ ನಿನ್ನನ್ನು ನನ್ನಲ್ಲಿಗೆ ಕರೆತಂದು ಬಿಟ್ಟಿದ್ದಕ್ಕಾಗಿ........

ನಿನ್ನ ಕಂಡ ನಿಮಿಷದಲ್ಲೇ ನಿಂತುಹೋಯಿತು ನನ್ನ ಕಂಬನಿಯ ಹನಿಗಳು ನಿನ್ನ ನಗುವಲ್ಲಿ..........
ತಿಳಿಯಲಿಲ್ಲ ನನಗೆ ಎಲ್ಲಿಂದ ನಿನ್ನ ಕಣ್ಣು ಸೆರೆಮಾಡಿತೋ ನನ್ನ ಉಸಿರಿನ ವೇಗವನ್ನು ನಿನ್ನ ಹೃದಯದ ಬಡಿತದಲ್ಲಿ........

ನನ್ನ ಮನದ ಗೂಡಿನಲ್ಲಿ ನೆಲೆಯಾದ ಒಲವಿನ
ಶ್ರೀಲಕ್ಷ್ಮೀಯ ಹುಟ್ಟುಹಬ್ಬದ ದಿನವಿದು ಎಲ್ಲರ ಮನಮೆಚ್ಚಿ ನೂರು ವರ್ಷ ಬಾಳು ಗೆಳತಿ ಅಂಬರದ ತಾರೆಯಾಗಿ ಮನದಲ್ಲಿನ ಮಹಾಲಕ್ಷ್ಮಿಯಾಗಿ..............

- ಚುಕ್ಕಿ

30 Jun 2017, 07:18 pm
Download App from Playstore: