*ಗೂಡು*

ಹೂ ಗಿಡದ ಪೊದೆಯೊಳಗೆ
ಹಕ್ಕಿಗಳು ಗೂಡುಕಟ್ಟಿ
ಮಿನುಗು ಕೀಟಗಳ ಹಿಡಿದು
ಸಿಕ್ಕಿಸಿದೆ ದೀಪವಾಗಿ
ಮೊಟ್ಟೆಗಳಾ ಹೊಡೆದು
ಮುಂಜಾನೆ ಮಂಜಿಗೆ ಅಡಗಿ
ಬಳ್ಳಾನೆ ಹಾಡಾಡುತಾವೆ
ಬೆಳ್ಳನೆಯ ಜೊಡಕ್ಕಿ
ಎರಡೆತ್ತು ಕಾಲ್ಗೆಜ್ಜೆಗೆ
ಮುಸುಕಾಗಿ ಕಣ್ಬಿಟ್ಟು
ನೆಲದ ಗಮಲಿಗೆ ಹೊರಟಾವೆ
ಬೇಟೆಗೆ
ಅವುಗಳಿಗೆ ಗೊತ್ತಿಲ್ಲ
ನೆಲದ ಬಲೆಯ ಗಮಲು

- ಹೇಮಚಂದ್ರ

30 Jun 2017, 09:49 pm
Download App from Playstore: