ಆತಂಕದಲ್ಲಿ.......ನನ್ನ ಮನ!

ಹೋಗಿ ಬರುವೆನು ಮಗುವೆ
ನೀ ನಿದ್ರಿಸು ಮೆಲ್ಲಗೆ
ನಿನ್ನ ಹಗಲಿ ಹೋಗುತಿರುವೆ
ನಾ ಇದೇ ಮೊದಲಿಗೆ!

ತನು ನಿನ್ನ ಹಗಲಿದರು
ಮನವೆಲ್ಲ ನೀ ತುಂಬಿರುವೇ
ನಾ ಸಾಗುವೆ ಮಾರ್ಗವರಸಿ
ಮೈಮರೆತು, ನಿನ್ನನ್ನೆ ಕನವರಿಸಿ!

ಇಂಪಾದ ಗಾಳಿಯಲ್ಲಿ
ಸೊಂಪಾಗಿ ನಿದ್ರಿಸುವ
ನಿನ್ನ ತೂಗುತಿರವ ಜೋಳಿಗೆಯು
ತಂಪು ಗಾಳಿಯು ಸೋಕಲು
ಹಾರಾಡುವುದು ಅತ್ತಿಂದಿತ್ತ
ದೂರದಿ ನೋಡಿ ನಿಟ್ಟುಸಿರು
ಬಿಡುವೆನು ನೆಮ್ಮದಿಯಲ್ಲಿ!

- ಶಕುಂತಲಾ

01 Jul 2017, 01:11 pm
Download App from Playstore: