*ಮಾರಿಯ ಗುಡಿಮುಂದೆ*

ಸುಟ್ಟ ಚರ್ಮದ ತಮಟೆಗೆ
ಸದ್ದು ಮಾಡಿದೆ ತಳವಾರನ ಕೈ
ಸದ್ದಿನ ಗಮಲೇರಿದೆ
ಮಾರಿಯ ಗುಡಿಮುಂದೆ
ನಗಾರಿ ನಾದಕ್ಕೆ
ಗೆಜ್ಜೆಗಳು ಹೆಜ್ಜೆಗಳಾಕುತ್ತಾ
ಅಮಲೇರಿದ ವಾದ್ಯ
ತಂಬಿಟ್ಟು ಬೆಳಗುತ್ತಾ
ಸಾಮ್ರಾಣಿ ಧೂಪದಾರತಿ
ಕುಂಕುಮ ಹೆಪ್ಪುಗಟ್ಟಿದೆ
ಕಪ್ಪು ಕಲ್ಲಿನ ಮಾರಿಗೆ
ಸಿಂಗರಿಸಿ ನಿಂತಿದೆ ಬಲಿಗೊಂದು ಕೊಣ
ತಳವಾರನ ಕೂಗಿಗೆ ಜುಮ್ ಎಂದ ರಕುತ
ಕಾಲುವೆಗೆ ಹರಿಯಿತು
ಮಾರಿಗೆ ತಗುಲೀತೆ ರಕುತ
ಕಲ್ಲು ದೇವರು ಕಲ್ಲಾಗಿ ನಿಂತು

- ಹೇಮಚಂದ್ರ

01 Jul 2017, 08:43 pm
Download App from Playstore: