ಮಾತೆಲ್ಲ ಮುಗಿದ ಮೇಲೂ........

ಮಾತೆಲ್ಲ ಮುಗಿದ ಮೇಲೂ ನಿನ್ನ ಉಸಿರಿನ ಸದ್ದು ಕೇಳುವ ಬಯಕೆ ಹೋಗಿಲ್ಲ................

ದಿನವಿಡೀ ನಿನ್ನ ಸನಿಹದಲ್ಲಿ ಕೂತಮೇಲೂ
ಕಣ್ಣು ಮುಚ್ಚಿದ ತಕ್ಷಣ ನಿನ್ನ ನೋಡುವ ತವಕ ಬಿಡಲಿಲ್ಲ..............

ನಿನ್ನ ಹೆಜ್ಜೆಗಳು ಮುನ್ನಡಿದ ಮೇಲೂ ಆ ಹೆಜ್ಜೆಗಳ ಗುರುತುಗಳಲ್ಲಿ ನನ್ನ ಪಾದವಿಡುವ ಆಸೆಯಿನ್ನು ಬಿಟ್ಟಿಲ್ಲ................

ಕಗ್ಗತ್ತಲು ಕವಿದ ಮೇಲೂ ನಿನ್ನ ನಗೆಯ ಸೊಬಗಿನ ಬೆಳಕು ನನ್ನ ನಯನಗಳಿಗೆ ಮನೋಹರವಾಗಿ ಕಾಣುತಿದೆಯಲ್ಲಾ...............

- ಚುಕ್ಕಿ

01 Jul 2017, 09:51 pm
Download App from Playstore: