ನಿನಗಾಗಿ ಸಖಿ....

ಹುಣ್ಣಿಮೆ‌ ಚಂದ್ರನಂತೆ‌ ನಿನ್ನ ಮುಖ
ಆ ಮೊಗವ ನೋಡುವುದರಲ್ಲಿ ಇದೆ ಏನೊ ಸುಖ
ಆ ಖುಷಿಯನೆ ಪ್ರೀತಿ ಎಂದರೆ ಸಾಕ
ನಾನಾಗೆನು ಆಗ ನಿನ್ನ ಮನಸಿಗೆ ನಿಜ ಸಖ.....

ಕ್ಷಣದಲೆ ಸೆಳೆಯುವ ನಗುವ ಕೂಡಿದ ದಂತ ಪಂಕ್ತಿ
ನಿನ್ನ ತುಟಿಗಳಲ್ಲಿವೆ ‌ಸೋಲಲು ಸುಂದರ ಸಂಗತಿ
ಬಾಗಿದ ಅತಿ ಸುಂದರ ನಿನ್ನ ನಯನಗಳು
ಕಟ್ಟಿವೆ ಕೇವಲ ನಿನ್ನದೇ ಬಿಂಬ ನನ್ನ ಕಣ್ಣಲಿ ಅವುಗಳು
ಇವು ಹುಟ್ಟಿಸುವ ಆಸೆಗೆ‌ ಎನ್ನಲಾಗುವುದೆ ಪ್ರೀತಿಯ ಮುಗುಳು....

ನಿನ್ನ ಮೂಗಿರುವುದು ಸಂಪಿಗೆ ಹಾಗೆ
ನಾ‌ ಅಭಿಮಾನಿ ನಿನ್ನ ಉದ್ದುದ್ದ ಜಡೆಗೆ
ನಿನ್ನದು ಬಳುಕುವ ಹಂಸ ನಡಿಗೆ
ಹಾಗೆಂದು ಸೋತು ನುಡಿದರೆ ಪ್ರೀತಿ ನನಗೆ ನಿನ್ನೆಡೆಗೆ
ಕೊನೆಯಿದೆಯಲ್ಲವೆ ಸೌಂದರ್ಯದ ತಳುಕು ಬಳುಕಿಗೆ....

ಕಣ್ಣ ಸೆಳೆಯುವ ನೀಳ‌ ಕೈ ಕಾಲು
ನಿನ್ನ ಕಂಡಾಗ ಮನಸಲಿ‌ ಆಗಬಹುದು ಕುಡಿದಂತೆ ಹಾಲು
ಅದರಲೆ ಬದುಕುವೆನೆಂದರೆ ಆಗುವುದೆ ಪ್ರೀತಿಯ ಸಾಲು
ನಿನ್ನ ಬದುಕು ಮನಸು ಕನಸಿಗೆ ನನ್ನಲಿ‌ ಕೊಟ್ಟರೆ ಸಮ ಪಾಲು
ನನಗೂ ಸಿಕ್ಕರೆ ಪ್ರಿಯ ಸಖನ ಸ್ಥಾನ ನಿನ್ನ ಮನಸಲೂ
ಅದಲ್ಲವೆ ‌ಸಖಿ ಮನಸಲಿ ನಿನಗಾಗಿ‌ ನಾನು‌‌ ಕಟ್ಟಿದ ಪ್ರೀತಿಯ ಮಹಲು.....

- ಶ್ರೀಕಾವ್ಯ

01 Jul 2017, 10:35 pm
Download App from Playstore: