ಸುಪ್ರಭಾತ

ನಿನ್ನ ಕಾಲ್ಗೆಜ್ಜೆ ನಾದವ ಕೇಳಿ
ಬೆಳಗಿನ ಜಾವ ಉದಯಿಸಿತೆಂದು
ಇಣುಕಿ ನೋಡಿದೆ ಆಚೆ

ನನ್ನ ನಲ್ಲೇ ಮುಂಜಾವಲ್ಲೆದು
ಅಂಗಾಳ ಗುಡಿಸಿ ಸಾರಿಸಿಹಳು
ಬಿಡಿಸಿಹಳು ಸುಂದರ ರಂಗವಲ್ಲಿ

ನೀರು ಹಾಕಿದ ನೆಲದ ಹಾಸಲ್ಲಿ
ಪ್ರತಿಫಲಿಸಿತು ನೇಸರನ ಬೆಳಕು
ನನ್ನ ಮುಖದ ಮೇಲೆ ಮಿಂಚಂತೆ

ಹೊಸತು ಹುರುಪು ಮೂಡಿತು
ಒಮ್ಮೆಲೇ ಚೈತನ್ಯ ಹೊರಹೊಮ್ಮಿತು
ಮಡದಿಯ ಕಂಡು ಅಲ್ಲೇ ಮರೆಯಲ್ಲಿ

- sathyabapuji

01 Jul 2017, 11:03 pm
Download App from Playstore: