ಮಗು ಹೊಸ್ತಿಲು ದಾಟಿದ ಹೊತ್ತು
ಹೊಸ್ತಿಲು ದಾಟಲು ಮುನ್ನಡಿಯಿಡುತಿಹೆಯಾ
ಜಾಣ್ಮೆಯ ತೋರಿ ನಾಜೂಕಾಗಿ ಕೂರುತಿಹೆಯಾ
ಪ್ರತಿಧ್ವನಿಸಿದೆ ಮನೆಯಲ್ಲಿ ನಿನ್ನ ಕೇಕೇ ದನಿಯಲ್ಲಿ
ಗೆದ್ದೆನೆಂದು ಬೀ...ಗುವ ನಿನ್ನ ಮದ್ದು ಮೊಗದಲ್ಲಿ
ನಿನ್ನ ಸಂತಸ ನಮಗೆ ತಂದಿದೆ ಹರುಷದ ಹೊಳೆ
ಯಾವಾಗ ದಾಟುವೆ ಹೊಸ್ತಿಲು ಹೇಳು ಬೆಳದಿಂಗಳೆ
ಕಾತರದಿ ಕಾದಿರುವೆವು ನಾವು ದೃಶ್ಯ ನೋಡಲು
ತಿಳಿಸು ಬೇಗ ಮೊಮ್ಮಗಳೇ ನಾವು ಸಿಹಿ ತಿನ್ನಲು
- sathyabapuji
01 Jul 2017, 11:06 pm
Download App from Playstore: