ನಿವೃತ್ತಿ

ನಾ ನ್ಯಾಯಾಧೀಶನಾಗಿ
ನ್ಯಾಯ ಹೇಳುತಿದ್ದೆ!!
ಅನ್ಯಾಯ ಮಾಡಿದವರ
ಕೈಗೆ ಕೋಳ ತೊಡಿಸುತಿದ್ದೆ!!

ನ್ಯಾಯ ದೇವಿಗೆ ನಾ
ಮೆಚ್ಚಿನ ಮಗನು ಅಂದು!!
ಕಾಲ ಸರಿದರೂನೂ
ಅನ್ಯಾಯ ಸುಳಿಯಲಿಲ್ಲ!!

ಕಣ್ಣಿನ ಕಪ್ಪು ಬಟ್ಟೆ
ತಾ ಸರಿಸಲಿಲ್ಲ ತಾಯಿ!!
ಕೈಯಲಿ ತಕ್ಕಡಿ ಹಿಡಿದು ನಿಂದು
ತಾ ತೂಗಿ ನೀಡಿದಳು ತೀರ್ಪು!!

ನ್ಯಾಯ ದೇವತೆಗೆ ನಾ
ನಿವೃತ್ತಯ ಮಗನು ಇಂದು!!
ಅನ್ಯಾಯ ಕಂಡರೂನೂ
ನ್ಯಾಯ ನೀಡಲಾರದೇ ಹೋದೆ!!

ಅಂತರಂಗದ ಕಣ್ಣಿಗೆ ನಾ
ಕಪ್ಪು ಬಟ್ಟೆ ಕಟ್ಟಿ ಕುಳಿತೆ!!
ಅನ್ಯಾಯದ ಪರದೆಯ ಹಿಂದೆ
ನಿವೃತ್ತಿಯ ಪಟ್ಟ ಹೊತ್ತು ಕುಳಿತೆ!!

- ಪಿ.ಜಿ.ಜ್ಯೋತಿ

02 Jul 2017, 10:35 am
Download App from Playstore: