ಮಡಿಕೆಯ ಬೇಧ

ಹೊನ್ನಿನ ಮಡಿಕೆಗೂ
ಮಣ್ಣಿನ ಮಡಿಕೆಗೂ
ನಡುವಲಿ ಏನಿದು ಬೇಧ!!
ಪಳ ಪಳ ಹೊಳೆಯುವ
ಹೊನ್ನಿನ ಮಡಿಕೆಯು
ಬೀಗುತಲಿಹುದು ನೋಡ!!

ಬಿದ್ದರೆ ಒಡೆಯುವ
ಮಣ್ಣಿನ ಮಡಿಕೆಯೇ
ನನ್ನಯ ಯೋಗವ ನೋಡು!!
ರಾಜನ ಮನೆಯಲಿ
ಹಿರಿಮೆಯ ಪಡೆದಿಹ
ನನ್ನಯ ಕೀರ್ತಿಯ ನೋಡು!!

ಬಡವನ ಗುಡಿಸಲ
ಮುರುಕಲ ಮನೆಯಲಿ
ನಿನ್ನಯ ಪಾಡದು ನೋಡು!!
ಬಿದಿರಿನ ಕಡ್ಡಿಯ
ಬಾಗಿಲ ಒಳಗಿನ ನಿನ್ನಯ
ಸೊಬಗಿನ ಬಗೆ ನೋಡು!!

ಬೀಗುತ ಸಾಗುತ ಇಬ್ಬರೂ
ಹೊರಟರು ದೂರದ
ಕೆರೆಯನು ಅರಸಿ!!
ಕೆರೆಯಲಿ ಮುಳುಗಿ ಏಳಲು
ಕಂಡವು ನೀರಿನ
ಹನಿಗಳು ತುಳುಕಿ!!

ಹೊನ್ನಿನ ಮಡಿಕೆಗೂ
ಮಣ್ಣಿನ ಮಡಿಕೆಗೂ
ಬೇಧವ ಕಾಣದು ನೀರು!!
ಇಬ್ಬರ ಒಳಗೂ ತನ್ನನು ತುಂಬಿಸಿ
ನಗುತಲೇ ನುಡಿಯಿತು
ನಾ ಎಲ್ಲರಿಗೂ ಸಮ ಪಾಲೆಂದು!!

- ಪಿ.ಜಿ.ಜ್ಯೋತಿ

02 Jul 2017, 10:42 am
Download App from Playstore: