ತೊರೆದಿರುವೆನು ನಾನು ಬದುಕುಬಲ್ಲೆನು...
ತೊರೆಯುವಂತೆ ಮಾಡಿರುವೆ ನಿನ್ನ ಸಂಗ
ಬಲ್ಲೆ ಒಬ್ಬಂಟಿಯಾಗಿ ಬದುಕುವುದು ಹೆಂಗ
ಮತ್ತೆ ತರಬೇಡ ನನ್ನ ಏಕಾಂತಕೆ ಭಂಗ
ನಾನೆಂದು ಕೊಡೆನು ಬೆಲೆಕಟ್ಟಲಾಗದ ನನ್ನ ಒಲವ ನಿಂಗ
ಅನ್ನುವರಲ್ಲೊ ಪತಿಯೆ ಸತಿಯ ಪರದೈವ
ನೀನಾದೆಯಲ್ಲ ನನ್ನ ಪಾಲಿಗೆ ಕಾಡಿಸುವ ದೆವ್ವ
ನಾ ನಂಬಿ ನಿನ್ನ ಪಾದವ ಸೇರಿದ ಹೂವ
ಹೊಸಕಿ ಹಾಕಿದೆಯಲ್ಲೊ ನೀಡಿ ಕೊಡಬಾರದ ನೋವ
ತಾಳಲಾಗದೆ ಒಲವಿರದ ನೋವ ಮುದುಡಿ ಹೋಗಿದೆ ಜೀವ
ನೀ ಹಾಕಿದ ಮೂರು ಗಂಟಿಗೆ ಸೋತು
ಏಳು ಹೆಜ್ಜೆಯ ನಂಟಿಗೆ ನನ್ನನೆ ಮರೆತು
ಬಾಳ ಏಳು ಬೀಳುಗಳಲಿ ನಿನ್ನಲೆ ಕಲೆತು
ಬಂದೆನೊ ನೂರು ಕನಸುಗಳ ಮನಸಲಿ ಹೊತ್ತು
ಹೊರಟಿರುವೆನು ನಿನ್ನಿಂದಲೆ ದೂರ ಅವುಗಳೆಲ್ಲ ಸತ್ತು
ಎದುರಿಸಿ ಬದುಕವೆನೊ ಬಂದರು ಸಾವಿರ ನೋವು
ನೀನಿಲ್ಲದಿದ್ದರು ನಡೆವುದು ನನ್ನ ಜೀವನ ಜಗವು
ಅಂದುಕೊಳ್ಳದಿರೊ ನೀನಿಲ್ಲದಿದ್ದರೆ ನನಗಿಲ್ಲ ಉಳಿವು
ನಿನ್ನ ಕೈಯಲಿಲ್ಲ ನನ್ನ ಅಳಿವು , ನಾ ನೋಡಬಲ್ಲೆ ಗೆಲುವು
ಸ್ವತಂತ್ರ ಬದುಕ ಎಣೆಯುವೆನು ಬರುವವರೆಗು ಸಾವು
- ಶ್ರೀಕಾವ್ಯ
02 Jul 2017, 10:44 am
Download App from Playstore: