ಅದೃಷ್ಟವೋ.....
ಹಣೆಬರಹವೋ......
ಅಪ್ಪ ಕೊಟ್ಟ ಆಭರಣವ
ಗಂಡ ದುಡಿದು ಕೂಡಿಟ್ಟ ಹಣವ
ಮುರುಕಲು ಕಪಾಟಿನಲ್ಲಿಟ್ಟು
ತೆರಳಿದೆವು,ಕದ ತೆರೆದಿಟ್ಟು
ಸಜೀವಗಳನ್ನೆ- ನಿರ್ಜೀವಗಳಾಗಿಸಿ
ದೋಚುವರು ಜಗವ ಮರುಳಾಗಿಸಿ
ಕಬ್ಬಿಣದ ಸರಪಳಿಯಿಂದ ಬಂದಿಸಿದ್ದರು.........
ಬಿಡಿಸಿ ಜಾಣ್ಮೆಯಿಂದ
ನಿನ್ನ ಪಡೆವರು.........
ನಾ ತೆರೆದಿಟ್ಟ ಕದವ ನೆನೆದು
ಮನವು ಆತಂಕದಲ್ಲಿ ಓಲಾಡಿತು
ಉಸಿರ ಬಿಗಿಹಿಡಿದು
ನೂರು ದೇವರ ಮನದಲ್ಲಿ ನೆನೆದು
ಓಡಿಬಂದೆವು.......
ಅದೃಷ್ಟವೋ- ಹಣೆಬರಹವೋ
ಇದ್ದದ್ದು ಇದ್ದಂತೆ ಇತ್ತು
ಹೊದ ಜೀವ ಮರಳಿತು
ನಮ್ಮ ಪುಣ್ಯವೋ....
ದೇವರ ವರವೋ.....
ಅಂತು ಸುಖಾಂತವು
ನಮ್ಮ ದುಗುಡವು
ಶಾರಧ
- ಶಕುಂತಲಾ
02 Jul 2017, 05:21 pm
Download App from Playstore: