ನಿಶಬ್ದದಲ್ಲಿ ನೂರು ಮಾತು
ನಿಶಬ್ದದಲ್ಲಿ ನೂರು ಮಾತನು ಕೇಳಬಹುದು
ಸಾವಿರ ಮಾತನಾಡಬಹುದು ಕೇಳವವರು
ಯಾರು ಇಲ್ಲ,ಉತ್ತರಿಸುವವರು ಯಾರಿಲ್ಲ................
ನೋಯಿಸುವವರು ಯಾರಿಲ್ಲ,
ಬೈಯುವವರಿಲ್ಲ ಯಾರಿಲ್ಲ,
ಬೇಸರಗೊಳಿಸುವವರು ಯಾರಿಲ್ಲ...........
ಸುಮಧುರ ಸಂಗೀತವ ಕೇಳಬಹುದು,
ಕರ್ಕಶ ಶಬ್ದಗಳನ್ನು ಕೇಳಬಹುದು,
ಎಡಬಿಡದೆ ಬಡೆದು ಕೊಳ್ಳುವ ಎದೆಬಡಿತ ಕೇಳಬಹುದು.............
ಕೋಟಿ ಕನಸುಗಳು ಕಾಣುವ ಕಣ್ಣುಗಳಿಗೆ
ಕಣ್ಣೀರನು ಸುರಿಸಿ ಸಮಾಧಾನಗೊಳಿಸಬಹುದು
ಎಂದಿಗೂ ನನಸಾಗದೆಂದು...............
ಮರೆಯಾಗದ ನಿನ್ನ ನೆನಪುಗಳನ್ನು ಮತ್ತೆ ಮತ್ತೆ ನೆನೆದು ನನ್ನಲ್ಲಿ ನಾನು ನೊಂದು ಭರವನ್ನು ಹೊತ್ತು ಬದುಕಬಹುದು, ಕೊರಗಿ ಕೊರಗಿ ಸಾಯಬಹುದು
ನಿಶಬ್ದದಲ್ಲಿ ನೂರು ಮಾತನು ಕೇಳಬಹುದು.......
- ಚುಕ್ಕಿ
02 Jul 2017, 08:06 pm
Download App from Playstore: