ಮುದ್ದು ಗೊಂಬೆ

ಮುದ್ದು ಗೊಂಬೆಯ ಮೊಗವ ನೋಡು
ಹೊಳಪು ತುಂಬಿದ ಚೆಲುವೆಯ ಕಾಂತೀಯ ನೋಡು..............

ತುಂಟ ನಗೆಯ ಬಿಳುಪು ನೋಡು
ಕೆನ್ನೆಯಲ್ಲಿ ನನ್ನ ನೋಡಿ ಬಂದ ಕೆಂಪು ನೋಡು..............

ಅವಳ ಅಂದ ಹೆಚ್ಚಿಸುವ ಗುಂಗುರದಾ
ಮುಂಗುರುಳು ನೋಡು............

ಮುದುಡಿದ ತುಟಿಯ ಮಾತು ನೋಡು
ಅವಳ ಮೃದುವಾದ ಸ್ಪರ್ಶದಿಂದ ಪುಲಕಗೊಂಡ
ನನ್ನ ಎದೆಯ ಬಡಿತ ನೋಡು................

ನೋಟಗಳಲ್ಲೇ ನನ್ನ ಕೊಳ್ಳುವ
ಕೋಮಲವಾದ ಕಣ್ಣು ನೋಡು.........
ಆ ಕಣ್ಣ ಚಂದವ ಹೆಚ್ಚಿಸುವ ಕಾಡಿಗೆಯ ಕಪ್ಪು ನೋಡು.........

- ಚುಕ್ಕಿ

03 Jul 2017, 09:09 pm
Download App from Playstore: