ಯಾರಿಗೋ

ಯಾರ ಹೃದಯದ ಹಣತೆ
ಯಾರ ಬದುಕಿಗೆ ಬೆಳಕೋ!!
ಯಾರ ಒಲವಿನ ಸೆಳೆತ
ಯಾರ ಸನಿಹದ ಗುರುತೋ!!

ಯಾರ ಹೆಸರಿನ ಯೋಗ
ಯಾರ ಹೆಸರಿನ ಜೊತೆಗೋ!!
ಯಾರ ಕನಸಿನ ಕುರುಹು
ಯಾರ ನಿದಿರೆಯ ಒಳಗೋ!!

ಯಾರ ಕೊರಳಿನ ರಾಗ
ಯಾರ ಬರಹದ ಸಾಲೋ!!
ಯಾರ ನೆನಪಿನ ಸುಖವು
ಯಾರ ಬದುಕಿಗೆ ವರವೋ!!

- ಪಿ.ಜಿ.ಜ್ಯೋತಿ

03 Jul 2017, 10:31 pm
Download App from Playstore: