ಮಡಿ- ಮೈಲಿ ಗೆ
ದೇವನೊಬ್ಬ ನಾಮ ಹಲವು
ಎಂದೋ ಸಾರಿದರು ಹಲವರು
ಈ ದೇವರ ನೈವೇದ್ಯ,ಆ ದೇವರಿಗೆ
ಮೈಲಿಗೆ,ಆ ದೇವರ ನೈವೇದ್ಯ
ಈ ದೇವರಿಗೆ ಮೈಲಿಗೆ
ನೀನಗೆ ಇಲ್ಲವಲ್ಲ ಸಮಾನತೆ!
ನಿನ್ನ ನಾಮದಿ ಹಲವು ವ್ರತಗಳ
ಮಾಡಿಸಿ ಇಷ್ಟಾರ್ಥ ಸಿದ್ದಿ ಪ್ರಾಪ್ತಿ
ಎನ್ನುವ ನಮ್ಮ ಆರವರು,
ತಾವೇಕೆ ಪಡೆಯಲಾರರು
ಉತ್ತಮೋತ್ತಮ ಸ್ಥಾನವನ್ನು
ಪೂಜಾ- ವ್ರತಗಳಿಂದ ನಿನ್ನ ಒಲಿಸಿಕೊಳ್ಳಲು ಸಾಧ್ಯವೇ!
ನಿನ್ನ ಮಕ್ಕಳೇ ನಾವೆಲ್ಲ
ಹರಿವ ರಕ್ತ ಒಂದೇಯಲ್ಲ
ಅವರು ಶ್ರೇಷ್ಠ- ನಾವು ಕೀಳು
ಮನುಜನ ಮನಸ್ಸಿಗಿಂತ
ಮೈಲಿಗೆ ಉಂಟೆ ದೇವ!
ಭಕ್ತಿಯಿಂದ ಪೂಜಿಸುವವರು
ಕೆಲವರು........
ಭಯದಿಂದ ಪೂಜಿಸುವವರು
ಬಹುಜನರು.......
ನೀ ಮುನಿಯುವೆ ಎಂಬ ಭಯದಲಿ!
ನಂಬಬೇಕು ದೇವರ
ಮೂಡರಾಗಬಾರದು
ನಂಬಿ ಆರವರ!
ಪ್ರಯತ್ನ ಇಲ್ಲದೆ ಫಲವಿಲ್ಲ
ಕೈ- ಕಟ್ಟಿ ಕೂತರೆ ಹೊಟ್ಟೆ ತುಂಬದು
ಭಯ ಅಳಿಸಿ- ಭಕ್ತಿ ಉಳಿಸಿ!
ಶಾರಧ
- ಶಕುಂತಲಾ
04 Jul 2017, 09:48 am
Download App from Playstore: