ಆಟ

ರಾಮಾಯಣದಲ್ಲಿ ಹೆಣ್ಣಿಗಾಗಿ ಹೋರಾಟ
ಮಹಾಭಾರತದಲ್ಲಿ ಮಣ್ಣಿಗಾಗಿ ಕಾದಾಟ
ಕನ್ನಡ ನಾಡಿನಲ್ಲಿ ಕಾವೇರಿಗಾಗಿ ಪರದಾಟ
ವಿಧಾನಸೌಧದಲ್ಲಿ ಕುರ್ಚಿಗಾಗಿ ಚೀರಾಟ

ಚುನಾವಣೆಗೆ ಮಂತ್ರಿಗಳು ಓಟಿಗಾಗಿ ಅಲೆದಾಟ
ಅಧಿಕಾರ ಕೖೆ ಸೇರಿದಾಗ ಬಡ ಜನರ ತುಳಿದಾಟ
ಸಿಗದ ಸರಕಾರಿ ಸವಲತ್ತುಗಳ ಕಳ್ಳಾಟ
ಮುಗಿಯದ ಬದುಕಿಗಾಗಿ ಮುಗ್ಧ ರೈತರ ನರಳಾಟ

ಅಕ್ರಮ ಆಸ್ತಿ ಪಡೆಯುವ ಶಾಸಕರ ಹೆಣಗಾಟ
ಲೋಕಾಯುಕ್ತರ ಬಲೆಗೆ ಬಿದ್ದಾಗ ಒಳಗೊಳಗೆ ಪೇಚಾಟ
ಲಂಚಕ್ಕಾಗಿ ಭ್ರಷ್ಟರ ನಿಯತ್ತು ಮಾರಾಟ
ಕಣ್ತುಂಬಿಕೊಳ್ಳಲೇಬೇಕು ನಮ್ಮ ರಾಜಕಾರಣಿಗಳ ಕೆಸರೆರಚಾಟ

ಹೆಣ್ಣು ಮಕ್ಕಳ ಮೇಲೆ ಪಾಪಿಗಳ ಅಟ್ಟಹಾಸದ ಚೆಲ್ಲಾಟ
ಸರ್ವರಿಗೂ ಕೋಳಿಸಿಯೂ ಕೇಳಿಸದಂತಿರುವ ಶೋಷಿತೆಯರ ಕಿರುಚಾಟ
ಕತ್ತಲಲ್ಲೇ ಕುಣಿದು ಬೆಳಕಿಗೆ ಬಾರದ ನ್ಯಾಯದ ನಲಿದಾಟ
ಸಾಗಲೇಬೇಕು ನಮ್ಮ ಸ್ವತಂತ್ರ ಕಂಡುಕೊಳ್ಳವ ಛಲದಾಟ



-ಜಯಂತಿ

- Jayanthi

04 Jul 2017, 12:30 pm
Download App from Playstore: