ಸ್ವಲ್ಪ ಹಾಳಾಗ್ಬಿಟ್ಟಿದಿವಿ...

ತುಂಬಾ ತಲೆ‌ ಕೆಡಿಸ್ಕೊ‌ ಬೇಡಿ ನೀವು
ಸ್ವಲ್ಪ ಹಾಳಾಗ್ಬಿಟ್ಟಿದಿವಪ್ಪ ನಾವು
ಅಯ್ಯೋ ಹಾಕ್ರಪ್ಪ ಯೋಚನೆಗೆ ಲಗಾಮು ತಾವು
ಹೇಳೋದು ಬೇಕಾದಷ್ಟಿದೆ ನಿಮಗೆ ನಾವು
ತುಂಬಾನೆ ಒಳ್ಳೆವ್ರಪ್ಪ ಅಂದ್ಕೊಂಡಿದ್ದಕ್ಕಿಂತ ತಾವು
ಕೆಟ್ಟವ್ರಲ್ಲಪ್ಪ ನೀವಂದ್ಕೊಂಡಷ್ಟು ನಾವು

ರೈಡು ಹೆಲ್ಮೆಟಿಲ್ದೆ ತಲೇಲಿ, ತ್ರಿಪ್ಸ್ ಬೈಕಲಿ ಸಿಗಾಕೊಂಡ್ರೆ ಫೈನು
ಚೆಂದದ ಹುಡುಗಿ ಬಂದ್ರೆ ಹಾಕ್ತಿವಪ್ಪ ಒಂದು ಲೈನು
ಆಗಾಗ ಒಂದು ಸ್ಮೋಕು, ಒಂದು ಪೆಗ್ಗು ವೈನು
ನಮಗೂ ಇರಬೋದಲ್ವೆ ಒಳಗೊಳಗೆ ಸ್ವಲ್ಪ ಪೈನು
ಹೇಳ್ರಪ್ಪ ನಾವು ಮಾಡ್ತಿರೊ ಅಂತ ದೊಡ್ಡ ತಪ್ಪೇನು
ನಗ್ತಾ ನಗ್ತಾ ಬದುಕುವುದೆ ಅಲ್ವೇ ಮೈನು

ಯಾಕ್ರಪ್ಪ ಹಿಂಗೆ ನೀವು ನಮ್ನ ಮಾತಲ್ಲೆ ಕೊಲ್ತೀರಿ
ಮಾತು ಮಾತಿಗೂ ಸೋಂಬೇರಿ ಅಂತೀರಿ
ಬಿರುದು ಕೊಡುವಿರಿ‌ ರೋಡ್ ರೋಡ್ ಅಲೆಯೊ ಪೋಕಿರಿ
ಹಾಕ್ತೀರ ಲೆಕ್ಕಕ್ಕೆ ಸಿಗದಷ್ಟು ಛೀಮಾರಿ
ಅಪ್ಪಿ ತಪ್ಪಿ ಸಿಗಾಕೊಂಡರೆ ಯಾಮಾರಿ
ಆಯ್ತು ಪರ್ವಾಗಿಲ್ಲ ಬೇಜಾರಾಗ್ಬೇಡಿ ಬಿಡ್ರಿ
ನಾವು ಇದಕ್ಕೆಲ್ಲ ತಲೆಕೆಡಿಸ್ಕೊಳ್ಳೋದೆ ಇಲ್ಲ ರೀ

- ಶ್ರೀಕಾವ್ಯ

04 Jul 2017, 02:08 pm
Download App from Playstore: