ಲೆಕ್ಕಾಚಾರ
ಮಾಡುವ ಮೂರು ಕಾಸು
ಸಂಪಾದನೆ....
ಮನದಲ್ಲೆ ಮೂಡುವುದು
ಮುನ್ನೂರು ಯೋಜನೆ...
ರಾಜಕಾರಣಿಗಳು ಮತಕೇಳಲು
ಅಧಿಕಾರ ಚುಕ್ಕಾಣಿ ಹಿಡಿಯಲು
ಒಡ್ಡುವರು ಹಣದ ಆಮಿಷ
ಗಳಿಸಲು ಬೀಸುವರು ಪಾಶ
ಮೂಷಿಕಗ್ರಾಹಿಗಳೆ ಬಹುಮಂದಿ
ತುಂಬಿರಲು....
ಸೆರೆಗೈಯಲು ಹಲವುಮಂದಿ
ಶ್ರಮವಹಿಸಲು.....
ಈ ಶೀತಲ ಯುದ್ಧದಿ
ಜನ ಸಾಮಾನ್ಯರು ನರಳುತಿಹರು
ನೀಡಿ- ಪಡೆವ ಲೆಕ್ಕಾಚಾರಗಳ
ಮೂಟೆಹೊತ್ತು ಸಾಗುವರು
ಕೂಡಿ- ಕಳೆದು,ಗುಣಿಸಿ- ಭಾಗಿಸಿದರು
ಗಣನೆಗೆ ನಿಲುಕದಷ್ಟು ಆಸ್ತಿಗಳ
ಮಾಡಿಡುವರು....
ಶಾರಧ
- ಶಕುಂತಲಾ
04 Jul 2017, 04:11 pm
Download App from Playstore: