ನಿನ್ನ ಕಂಡ ಮುಂಜಾವು
ಈ ಮುಂಜಾವಿನ ವೇಳೆ
ಕೊಡೆ ಹಿಡಿದು ನೀ ಬರುವಾಗ
ಆ ಉಷೆಗೂ ನಾಚಿಕೆ
ನಿನ್ನ ರಂಗಾದ ಗುಳಿ ಕೆನ್ನೆ ಕಂಡು!!
ಎಳೆ ಹುಲ್ಲ ಹಾಸಿಗೆಯ ಮೇಲೆ
ನಿ ನಡೆದು ಬರುವಾಗ
ಆ ಇಬ್ಬನಿಯ ಹನಿಗಳು ಕರಗಿ
ತೊಳೆದಾವು ನಿನ್ನ ಪಾದ!!
ತಂಪಾದ ತಂಗಾಳಿ ತಾನು
ನಿನ್ನ ಕೋಮಲ ಮೈ ಸೋಕಿ
ಬಂದು ಸುತ್ತುವರಿದು ಆವರಿಸಿತು
ನನ್ನ ಏಕಾಂತದ ಬದುಕ ತುಂಬ!!
ಮಂಜಿನ ಮುಸುಕನು ಹೊದ್ದು
ಆ ಚಟ ಪಟ ಮಳೆಯಲಿ ಅದ್ದು
ನಿನ್ನ ನೋಡುತ್ತ ನಿಂತಾಗ ಕದ್ದು
ನನ್ನ ಎದೆಯಲಿ ನಿಲ್ಲದ ಸದ್ದು!!
- ಪಿ.ಜಿ.ಜ್ಯೋತಿ
05 Jul 2017, 07:29 am
Download App from Playstore: