ಮನದ ರಾಗ

ಮೌನವಾಗಿ ಬಲೆ ಬೀಸದೆ
ನುಡಿಸು ನಿನ್ನ ಮನದ ಪ್ರೀತಿಯ ರಾಗ...
ನವಿರಾಗಿ ಕಣ್ಣು ತೆರೆದೆ
ಮೌನ ಮುರಿಯದ ಮರದ ಹಾಗೆ...
ಒಳಗಿನ ಮಾತು ನಿಲ್ಲಿಸಿ
ಹೃದಯ ಕಾತರಿಸಿದೆ ನಿನ್ನ ಬರುವಿಕೆಗಾಗಿ...


ಬೀಸುವ ತಂಗಾಳಿಯಲ್ಲೂ ನಿನ್ನದೇ ಹೆಜ್ಜೆ ಸದ್ದು
ತಿರುಗಿ ನೋಡಿದಾಗ ಬರಿ ಗಾಳಿಯದೇ ಸಪ್ಪಳ
ಆಲಿಸುವ ದನಿಯಲ್ಲೂ ಕೇಳಿದೆ ನಿನ್ನದೇ ಕೂಗು
ಆದರೆ ಗೊತ್ತಾಗಲೇ ಇಲ್ಲ ಕೂಗಳತೆಯ ದೂರ
ಮೌನ ಮುರಿದು ಮಾತಾಡ ಹೊರಟೆ...
ನನ್ನ ಮಾತು ನನ್ನದಾಗಿರಲಿಲ್ಲ
ಮಾತು ಮಾತಾಗಿರಲಿಲ್ಲ
ಮೌನ ಮುರಿವ ಆಸೆ ನನಗಾಯಿತು
ಹಾಡುತ್ತಾ ಹಾಡುತ್ತಾ...


ಒಳದನಿಯ ಪಿಸುಮಾತಿಗೆ ಕಿವಿಗೊಟ್ಟು ಬಾ ನನ್ನಿನಿಯ
ಪ್ರೀತಿಯ ತೊದಲು ನುಡಿಗೆ ಸ್ಪಂದಿಸು ಓ
ಗೆಳೆಯ
ಚಿತೆಗೇರಿದಾಗಲೇ ಮರುಹುಟ್ಟಿ ಬಂದರೆ
ಮತ್ತೆ ನಿನ್ನವಳಾಗಿ ಉಳಿಯುವ ತೀರದ ಬಯಕೆ
ಕಾದಿರುವೆ ಕೊನೆಯಿಲ್ಲದ ತಾಳ್ಮೆಯಿಂದ...
ಬಂದ ಹೆಜ್ಜೆ ನಿನ್ನದಾಗಿರಲಿಲ್ಲ
ನಾನು ನಾನಾಗಿರಲಿಲ್ಲ
ನಗುತ್ತ ಮನಸ್ಸ ಮತ್ತೆ ತೆರೆದಿಟ್ಟಿದ್ದೇನೆ
ಕಾಯುತ್ತಾ ಕಾಯುತ್ತಾ...

- Jayanthi

05 Jul 2017, 05:08 pm
Download App from Playstore: