ಕವನ..........✍

ಕೈಗೂಡಿ ಬಾರೆ ಕವನ ಅಚ್ಚರಿಯಂತೆ
ಪದಗಳನ್ನು ಕೊಂಡು ತಾರೆ ಎಲ್ಲರ ಮನ ಮೆಚ್ಚುವಂತೆ//

ಪ್ರಕೃತಿಯ ವರ್ಣಿಸುವ ಕಿಚ್ಚು ಹೆಚ್ಚಾಗಿದೆ ನನ್ನಲ್ಲಿ
ಹರಿಯುತ್ತಿದೆ ಕವನಗಳ ಹೊಳೆ ನನ್ನ ಮನದನ ಮಾಳಿಗೆಯಲ್ಲಿ//

ಎಲ್ಲಿಂದ ಈ ಬಡವಿಯ ಮನಸೇರಿದೆ ಕರೆಯಿಲ್ಲದೆ ಕವನ,ನಿನ್ನ ಆಗಮನದಿಂದ ನೂರಾರು
ಅನುಭವಗಳನ್ನು ನಾನೇ ತಿಳಿಯದ ನನ್ನನ್ನು ಪರಿಚಯಿಸಿದೆ ನನಗೆ//

ಭಾವನೆಗಳ ಸಂಚಲನ ನೀನು,
ಜೀವನಗಳ ಜಂಜಾಟ ನೀನು,ಮನಸ್ಸುಗಳ
ಮಾತು ನೀನು,ಏನೆಂದು ತಿಳಿಸಲಿ ಎನಿಲ್ಲವೆಂದು
ಹೇಳಲಿ ನಿನ್ನನ್ನು//

ನಿನಗೊಂದು ರೂಪ ಕೊಡಲೇ ನನ್ನಲ್ಲಿನ
ಉಸಿರು ತುಂಬಿ ಕಣ್ಣಲ್ಲಿ ನೋಡುವ ಸೊಗಸಾದ ದೃಶ್ಯಗಳಿಂದ ಹೀರಿದಸಾರ ನಿನ್ನ ಮಡಿಲಲ್ಲಿ ಮಡಗಿ//

ಯಾರಕಣ್ಣು ನಿನ್ನ ಹೊನ್ನು ಕದಿಯದಂತೆ
ಪದಗಳಲ್ಲಿ ಬಚ್ಚಿಡಲೇ ನಿನ್ನ ನೋಡಿ ಮೆಚ್ಚಿದವರ ಕಣ್ಣುಗಳ ಹೊಳಪು ನಿನ್ನ ಕರಗಿಸದಂತೆ ನನ್ನ ನಗುವಿನ ಪರದೆ ನಿನಗಿಂದು ಕಟ್ಟಲೇ ಕವನವೇ//

- ಚುಕ್ಕಿ

05 Jul 2017, 06:45 pm
Download App from Playstore: