ನಿನ್ನ ನೋಡುವ ಅವಕಾಶ............
ನಿನಗಾಗಿ ಒಂದು ಕವನ ಈ ಕ್ಷಣ
ಬರೆಯುವ ಆಸೆಯಾಗಿದೆ ನನ್ನ ಮೇಲಿನ
ಪ್ರೀತಿಯ ನೋಡು ಗೆಳೆಯಾ.............
ಮಾತುಗಳು ಹತ್ತಾರು ಆಗಿರಬಹುದು
ಭಾವನೆಗಳು ನೂರಾರು ಕೂಡಿಟ್ಟಿರಬಹುದು
ಪ್ರೀತಿಯೇoಬ ಒಂದು ಪದಕೆ ಸರಿಯಾದ ಮಾತು ಅದ್ಯಾವುದೋ ನಿನ್ನ ಮುಂದೆ..............
ಮಾತಲ್ಲಿ ನಿನ್ನ ಹಚ್ಚಿಕೊಂಡಿದ್ದಾರೆ
ಮಾತಲ್ಲೇ ಹೇಳುತ್ತಿದ್ದೆ ನಿನ್ನ ಮೇಲಿನ
ಅಕ್ಕರೆಯನು.................
ಮನಸು ಕಂಡ ಅಪ್ರತಿಮ ಸ್ನೇಹ ನಿನ್ನದು
ಹೇಗೆತಾನೆ ಹೇಳಲು ಸಾಧ್ಯ ನಿನ್ನ ಪ್ರೀತಿಯ
ನಿಲುವನ್ನು ಮಾತಲ್ಲಿ...........
ನಿನ್ನ ಕದ್ದು ನನ್ನಲ್ಲಿ ಬಚ್ಚಿಡಲೇ
ಎಲ್ಲಿಗೂ ಬಿಡದಂತೆ ಯಾರು ನಿನ್ನ
ನೋಡದಂತೆ.........
ನಿನ್ನ ನಗುವಿನ ಮೇಲೆ ಕೋಪ ನನಗೆ
ನನ್ನ ಸ್ಥಾನ ಅದು ಕದ್ದಿವುದೆಂದು.........
ನಿನ್ನ ನೋಡುವ ಪ್ರತಿಯೊಬ್ಬರ ಮೇಲೂ
ಹೊಟ್ಟೆ ಕಿಚ್ಚಿ ನನಗೆ ಅವರ ಕಣ್ಣು ನಾನಾಗಿಲ್ಲವೆಂದು..................
ದಿನನಿತ್ಯ ನಿನ್ನ ನೋಡುವ ಅವಕಾಶ ನನಗುಲ್ಲವೆಂದು.........
- ಚುಕ್ಕಿ
05 Jul 2017, 07:41 pm
Download App from Playstore: