ತಾಯಿಯ ಆಕ್ರಂದನ
ಹೇಳಿ ಹೋಗಬಾರದಿತ್ತೆ ಕೂಸೆ
ತಾಯಿಯ ಮಮತೆಗಿಂತ
ಪ್ರೀತಿಯ ವ್ಯಾಮೋಹ ಹೆಚ್ಚು ಆಯಿತೇ ?
ನೀ ಬಯಸಿದವಳನ್ನು ನಾ ಮಗಳಾಗಿ ನೋಡಿಕೊಳ್ಳಲಾಗದವಳೇನು
ನನ್ನ ಹೃದಯ ಬಡಿತ ಗಿಂತ
ಪ್ರೀತಿಯ ಮಿಡಿತ ಮಿಗಿಲಾಯಿತೇ ?
ನಿನ್ನ ಅಪ್ಪನ ಆಕ್ರೋಂದನ ನಾ ಹೇಗೆ ಸಮಾಧಾನ ಮಾಡಲಿ ಕೂಸೆ
ಒಡಹುಟ್ಟಿದವರ ಆಸೆಗಳಿಗೆ ತಣ್ಣೀರು ಎರಚಿ ಹೊರಟು
ಹೋಗುವ ಮುನ್ನ ಅರೆಕ್ಷಣ ಯೋಚಿಸಬಾರದಿತ್ತೇ ಕೂಸೆ ?
ಮುಪ್ಪಿನಲ್ಲಿ ನೀನೆ ಆಸರೆಯಾಗುವೆಂದು ಹಂಬಲಿಸಿ
ಕಷ್ಟಗಳ ಮರೆಮಾಚಿ
ಸದಾಕಾಲ ನಿನ್ನ ನಗು ಬಯಸುತ್ತೀದೆ
ನೋವುಗಳಿಂದ ಸವೆದಿರುವ ಮನಕೆ
ಮತ್ತಷ್ಟೂ ನೋವಿನ ಕೊಳ್ಳಿ ಇಟ್ಟು ಹೋಗುವ ಮುನ್ನ ಒಮ್ಮೆ ಯೋಚಿಸಬಾರದಿತ್ತೇ ಕೂಸೆ ?
ಮತ್ತೆ ಬಯಸಿರುವೆ ನನ್ನ ಮಡಿಲಲ್ಲಿ ಹುಟ್ಟಿ ಬಾ ಕೂಸೆ
ಎ ಜಿ ಶರಣ್
- ಎ ಜಿ ಶರಣ್
07 Jul 2017, 05:35 pm
Download App from Playstore: