ನೀನು ಮತ್ತು ನಾವು
ಕಟ್ಟಿರುವರು ನಿನಗೊಂದು
ಆಲಯ.....
ಪ್ರತಿನಿತ್ಯ ಪಡೆಯಲೆಂದು
ಆದಾಯ....
ಹೊತ್ತು ಬರುವರು
ನೂರಾರು ಆಶಯ
ಕುತ್ತು ತರದಿರು
ನಮಗಿರಲಿ ನಿನ್ನ ಅಭಯ!
ಸೃಷ್ಟಿ ಕರ್ತನು ನೀನೆಂದು
ನಂಬಿರುವೆವು ನಾವು
ನಿನ್ನನ್ನು ಸೃಷ್ಟಿಸುವರು ನಾವಿಂದು
ಮುಗ್ದ ಮಂದಿ ನಾವು!
ಜೀವನ ನಡೆಸಲೆಂದಿಹರು
ಊರಿಗೊಬ್ಬ ಜ್ಯೋತಿಷಿ
ಜನರ ಮೂರ್ಖರಾಗಿಸುತಿಹರು
ಪೂರ್ವಾಪರಗಳ ದೂಷಿಸಿ!
ಆರವರೆ ದೇವರೆಂದು
ಪೂಜಿಸುತಿಹರು ಭಾವಿಸಿ
ನಮ್ಮಲೂಟಿ ಮಾಡುತಿಹರು
ಮಂತ್ರಮುಗ್ದರಾಗಿಸಿ!
ಪ್ರತಿ ನೋವಿಗೊಂದು
ವ್ರತವ ಸೂಚಿಸಿ
ಗಾಳಿಯಲ್ಲಿ ಗೋಪುರವೊಂದು
ನಿರ್ಮಿಸುವರು ಅರ್ಥವಾಗದ
ಮಂತ್ರಗಳ ಮಳೆಯ ಸುರಿಸಿ!
ಕಾಣಿಕೆ ಇತ್ತವರಿಗೆ
ಹರಸುವರು
ಕಾಣಿಕೆ ನೀಡದವರಿಗೆ
ಆರತಿಯನ್ನು ನೀಡರು!
ಕಾಣಬೇಕು ನಿನ್ನ
ಮಾಡುವ ಕಾಯಕದಿ
ಜಪ- ತಪದಿ ನಿನ್ನ
ಕಾಣಲಾಗದು ಈ ಜನುಮದಿ!
ಶಾರಧ
- ಶಕುಂತಲಾ
08 Jul 2017, 11:35 am
Download App from Playstore: