ಇರುವುದೆಲ್ಲವ ಬಿಟ್ಟು.....

ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ
ಮನ ತುಡಿವುದೆಯಂತೆ ಜೀವನ

ಇರುವುದೆಲ್ಲವ ನೆನೆದು ಬಾರದನೆಂಬಿದನು ಬಿಡು
ಹರುಷಕ್ಕಿದೆ ದಾರಿ ಎಂದಿತು ಡಿ.ವಿ.ಜಿ ಅವರ ಕವನ

ಅತ್ತ ಕಡೆ ಇಲ್ಲ,ಇತ್ತ ಕಡೆಯೂ ಬರುತ್ತಿಲ್ಲ‌ ಕೇಳಿದ‌ ಮನ
ಯಾರು ಹೇಳುವವರಿಲ್ಲ ಎತ್ತ ಕಡೆಗೆ ಕೊಡಬೇಕು ಗಮನ

ಇರುವುದೆಲ್ಲವ‌ ಬಿಟ್ಟು, ಇರದುದರೆಡೆಗೆ ಹುಡುಕಾಟ
ಸಿಗದಿದ್ದಾಗ ನೋವಿನೊಳಗೆ ಮನಸಿನ‌ ತೊಳಲಾಟ

ಏನು ಇಲ್ಲದಿದ್ದರೂ ಕೆಲವೊಮ್ಮೆ ಹರುಷದ ರಸದೂಟ
ಒಮ್ಮೆ ಬೇಕಾದ್ದೆಲ್ಲ ಸಿಕ್ಕರೂ ಏತಕೆ ಸಿಕ್ಕಿತ್ತೆಂಬಂತೆ ತಾಕಲಾಟ

ಹೇಳುವರು ಇಲ್ಲದ್ದ ಪಡೆಯಲು ಇರಬೇಕು ಛಲ
ಹುಡುಕದೆ ಕುಳಿತರೆ ನೀನು ಬದುಕಲಿ‌ ವಿಫಲ

ಪಡೆದೆ ತೀರಬೇಕೆಂದು ಹೊರಟರೆ ಹರಸಿ ಸಫಲ ಛೇಡಿಸುವರು ಬಯಸಿ ಹೊರಟಿರುವರು ಅತಿಆಸೆಯ ಫಲ

ತಿಳಿಯುವುದೇಗೆ ಯಾವುದು ಒಪ್ಪು ,ಯಾವುದು ತಪ್ಪು
ಸರಿ ತಪ್ಪುಗಳ ಜಂಜಾಟದಲಿ ಆಗಿಬಿಡುವೆವು ಬೆಪ್ಪು

ಬದುಕಲಾಗುವುದೆ ಜಗದಗಲ‌ದ ಅಭಿಪ್ರಾಯವ ಒಪ್ಪಿ
ಬದುಕುವುದು ಹೇಗೆ ಇರುವುದ ಅಥವ ಇಲ್ಲದಿರುವುದ ಅಪ್ಪಿ

- ಶ್ರೀಕಾವ್ಯ

08 Jul 2017, 12:35 pm
Download App from Playstore: