ಬದುಕು
ತಿಳಿ ನೀಲದಲ್ಲಿ
ಲೀನವಾಗುವ ಓ ಬದುಕೇ
ಬಯಸಿದೆಲ್ಲವೂ
ಪಡೆದುಕೊಳ್ಳುವ ತನಕ!!
ಅತಿ ಆಸೆಯಿಂದ ನೀ
ಬೆಳೆಸಿಕೊಂಡಿರುವ ಬದುಕು
ಈ ಭೂಮಿಯಲ್ಲಿ ನಿನ್ನ
ಉಸಿರು ಇರುವ ತನಕ!!
ಕ್ಷಣ ಮಾತ್ರದಲ್ಲಿಯೇ
ತನ್ನ ಪಾತ್ರ ಅಳಿಸುವ ಬದುಕು
ತಾ ಸೂತ್ರ ಹಿಡಿದು
ಹೊರಡುವುದು ಎಲ್ಲ ತೊರೆದು!!
ಬಿರುಗಾಳಿಯಲ್ಲಿ
ಜೋರಾಗಿ ಉರಿಯುವ ದೀಪ
ದಹಸಿದರೂ ಎಲ್ಲ
ಕೊನೆಗೆ ಆರಲೇ ಬೇಕಾದ ಶಾಪ!!
ಪಡೆದದ್ದು ಏನು
ಉಳಿಯಿತು ಎಂದು
ಯೋಚಿಸಲು ಸಮಯದಲ್ಲಿ
ನಿನ್ನ ಬದುಕಿನ ಕೊನೆಯು ಅಲ್ಲಿ!!
ಮಾಡಿರುವ ತ್ಯಾಗ
ನಡೆದಿರುವ ನಿಷ್ಠೆ
ಬರುವವು ನಿನ್ನ ಜೊತೆಗೆ
ಅದುವೇ ಉಳಿವುದು ಕೊನೆಗೆ!!
- ಪಿ.ಜಿ.ಜ್ಯೋತಿ
08 Jul 2017, 06:38 pm
Download App from Playstore: