ಪ್ರೀತಿಗೆ ಹೊತ್ತು ಗೊತ್ತಿಲ್ಲ..

ಓ ನಲ್ಲೇ
ಈ ನಲ್ಲನ ನಿದ್ದೆ ಕದ್ದೆ
ಮೆಲ್ಲನೆ ಪಿಸು
ಮಾತಾಡಿ..

ಮಾತಿನ ಮೋಡಿಗೆ
ಮನದಲ್ಲಿ ಸಣ್ಣಗೆ
ಮೂಡಿತ್ತೊಂದು ಬಯಕೆ...
ಯಾವಾಗಲೂ ನೀನು
ನನ್ನವಳಾಗಿಯೇ ಇರಲೆಂದು
ದೇವರಿಗೆ ಕಟ್ಟಿದೆ ಹರಕೆ...

ಮಾತಾಡಿ ಮಾತಾಡಿ
ಹೋಗಿದ್ದೆ
ಗೊತ್ತಾಗಲಿಲ್ಲ
ಹೊತ್ತು...... !
ನಾನಾಗ
ನೋಡಿಕೊಂಡೆ
ನನ್ನ ಕೈಯ ವಾಚು
ಮೆಲ್ಲಗೆ ಸರಿದಿತ್ತು
ರಾತ್ರಿ 12 ರ ಹೊತ್ತು......!

ಆದರೂ ಮಾತನಾಡುವ
ಮಿಡಿತ-ತುಡಿತ
ಇನ್ನು ಹೆಚ್ಚಿಗೆ ಇತ್ತು.....
ಆದರೆ ಏನು ಮಾಡೋದು
ಈ ಪ್ರೀತಿಗೆ ಸಾಲದು
ಯಾವುದೇ ಹೊತ್ತು ಗೊತ್ತು...

ಪ್ರೀತಿಯಿಂದ...
ವಿಜಯ್....9741940305

- ವಿಜಯಾನಂದ

08 Jul 2017, 07:52 pm
Download App from Playstore: