ಕರುನಾಡ ಕಡಲು

ಕರುನಾಡ ಕಡಲಿನಲಿ
ಈಜುವ ಮೀನಾಗಿ
ರೂಪುಗೊಂಡಿಹುದು
ಈ ನನ್ನ ಬದುಕು!!

ಆಡುತಲೇ ನಾ ಕಲಿತ
ತೊದಲ ನುಡಿ ಕನ್ನಡವು
ಬೆರೆತು ಹೋಯಿತು
ನನ್ನ ಬದುಕಿನೊಡನೆ!!

ಶಿತಿಲವಾಗಿಹ ನನ್ನ
ತನುವ ನೆತ್ತರ ಗಡಿಗೆ
ಮಿಡಿದು ಹೇಳುವುದೊಂದೆ
ಕನ್ನಡವು ನನದೆಂದೇ!!

ಬಿಸಿಯುಸಿರು ತಂಪಾಗಿ
ಕಡಲಿನೊಳು ಮುತ್ತಾಗಿ
ಹೊರಬರಲಿ‌ ಕನ್ನಡದ
ಸಿರಿ ಘನತೆಯಾಗಿ!!

- ಪಿ.ಜಿ.ಜ್ಯೋತಿ

09 Jul 2017, 04:19 pm
Download App from Playstore: