ಗಾಳಿ..............✍

ಓಡದಿರೆ ಗಾಳಿ ಅತ್ತಿತ್ತ ಬೀಸುತ ರಭಸವಾಗಿ
ನಿನ್ನ ನಡೆದಾಟ ನಿಧಾನಿಸು ನನ್ನ ಉಸಿರು ಮಲಗಿರುವುದು ನನ್ನ ಮಡಿಲಲ್ಲಿ ಮಗುವಂತೆ...............

ಅಲುಗಾಡದೆ ಹೆಜ್ಜೆ ಹಾಕು ಸದ್ದು ಮಾಡದಂತೆ
ಮೆಲ್ಲ ಮೆಲ್ಲನೇ ತಂಗಾಳಿಯಾಗಿ ನನ್ನ ಪ್ರೀತಿಯ ತಂಪು ತುಂಬಿ ನಿನ್ನಲಿ.................

ಅವಳ ಎದೆಯ ಸೇರಿ ನೋಡಿ ಬಾರೆ ಗಾಳಿ ನನ್ನ ರೂಪ ಅಲ್ಲಿರುವುದೇ ಎಂದು ಇದ್ದರೆ ಅವಳನ್ನು ಜೋಪಾನವಾಗಿ ನನ್ನಂತೆ ನೋಡಿಕೊಳ್ಳುತ್ತಿರುವುದೇ ಎಂದು..........

ನಿರಂತರ ನಿನ್ನಂತೆ ನಾನಿರಲಾರೆ ಅವಳ ಜೊತೆಗೆ
ನನ್ನಲ್ಲಿನ ಪ್ರೀತಿಯ ಉಸಿರು ನೀನು ಮಧುರವಾಗಿ ಅವಳ ಮನಸೇರೆ ನನ್ನ ಪ್ರೀತಿಯ ನೆರಳಂತೆ..................

- ಚುಕ್ಕಿ

10 Jul 2017, 10:33 pm
Download App from Playstore: