ಪ್ರೀತಿಯ ಮಾಯೆ

ವನದಲಿ ಹಸುರಿನ ತೆನೆಯು ಚಿಗುರಲು
ಮನದಲಿ ಹರಿದಿದೆ ಪ್ರೀತಿಯ ಹೊನಲು
ಚಂದದಿ ಸುಮವು ಶ್ರೀಗಂಧ ಬೀರುತ್ತಿರಲು
ಅಂದದಿ ಮೊಗವು ನಗೆಯ ಚೆಲ್ಲುತ್ತಿರಲು
ಅನಾಮಿಕ ನಾ ಆಗಿರುವೆ ಮೈಮರೆಯುತ್ತಿರಲು


ನೀ ಸನಿಹ ಇದ್ದಾಗ ಹುಣ್ಣಿಮೆಯ ಬೆಳದಿಂಗಳು
ನೀ ದೂರವಾದಾಗ ಅಮವಾಸ್ಯೆಯ ಕರಿನೆರಳು
ನೀ ನುಡಿಯಲು ಕೊಳಲು ಗುನುಗುತ್ತಿರಲು
ನೀ ನಡೆಯಲು ಹೆಜ್ಜೆ ನಲಿಯುತ್ತಿರಲು
ಕಣ್ಣಂಚಿಲ್ಲಿ ನಾ ಸೋಲೂತ್ತಿರಲು


ನಿನ್ನ ಕಂಡಾಗ ನಕ್ಷತ್ರದ ದೀಪ ಮಿನುಗುತ್ತಿರಲು
ನೀ ಮರೆಯಾದಾಗ ಎದೆಯಲ್ಲಿ ಮೇಣದ ದೀಪ ಕರಗುತ್ತಿರಲು
ನೀ ಅಳಲು ತುಂತುರು ಹನಿಗಳು ಬೀಳುತ್ತಿರಲು
ನೀ ನಗಲು ಕಾಮನಬಿಲ್ಲು ಮೂಡುತ್ತಿರಲು
ಪ್ರೀತಿಯಲ್ಲಿ ನಾ ತೇಲುತ್ತಿರಲು

- Jayanthi

11 Jul 2017, 08:31 am
Download App from Playstore: