ಹುಸಿಯ ನುಡಿದಿಲ್ಲವೇ ಗೆಳತಿ.......

ಹುಸಿಯ ನುಡಿದಿಲ್ಲ ಗೆಳತಿ
ನಿನ್ನ ಅಗಲಿ ಇರಲಾರೆನೆ ತಿಳಿಯೇ
ನನ್ನೊಳವೆ............

ಕರ್ಪುರದ ಗೊಂಬೆ ನೀನು ಅಗ್ನಿಯ
ಶಾಖಕ್ಕೆ ತಾಗದಂತೆ ನನ್ನ ಕಣ್ಣಲ್ಲಿನ
ತಂಪಲ್ಲಿ ಕೂಡಿಟ್ಟು
ನಿನ್ನ ನೋಡಿಕೊಳ್ಳುತ್ತಿರುವೆ...........

ಯಾರಿಗೂ ನೀನೊಲಿಯ ಬಾರದೇ ನನ್ನ ತೊರೆದು ಈ ಜಗದಲ್ಲಿ ಸ್ವಾರ್ಥವಾದರು ತಿಳಿಯೇ ಅತಿಯಾದ ಪ್ರೀತಿಯೆಂದಾದರು ಅರಿಯೇ ನನ್ನ ಮನದ ಮಲ್ಲಿಗೆ..............

ಹುಸಿಯ ನುಡಿದಿಲ್ಲವೇ ಗೆಳತಿ ನಿನ್ನ ಪ್ರತಿಯೊಂದು ಕ್ಷಣವೂ ನನಗೆ ಮಿಸಲಿಡೆಂದು ಮನವು ದಿನವೂ ನಿನ್ನ ಬೇಡುತ್ತಿದೆ ಚೆಲುವೆ........

ನಿನಗೆ ಇರಬಹುದು ನೂರಾರು ಪರಿಚಿತರು ನಿನ್ನ ಸುತ್ತಲಿನ ವಾತಾವರಣದಲ್ಲಿ ಆದರೆ ನನಗೆ ನಿನ್ನ ಬಿಟ್ಟು ನನ್ನ ನೆರಳು ಕೂಡ ನನ್ನದಾಗಿ ಕಾಣಲಾರದೆ ಸಂಗಾತಿ...............

ಕಲ್ಲಿನ ಕೋಟೆಯಂತ ನನ್ನ ಮನದಲ್ಲಿ ಮೃದುವಾದ ಹೂವಾಗಿ ಅರಳಿರುವೆ ನೀನು ಪ್ರೀತಿಯ ಬಂಧನವನ್ನು ಬೆಸೆದು................

ಹುಸಿ ನುಡಿದಿಲ್ಲವೇ ಗೆಳತಿ ನೀನೇ ನನ್ನ ಹೃದಯದೊಡತಿ ಇಂದಿಗೂ ಎಂದಿಗೂ ನಾನೆಂಬ ಅಚ್ಚಳಿಯದ ಕನಸು ನನಸಾಗಿ ಇರುವವರೆಗೂ..........

- ಚುಕ್ಕಿ

12 Jul 2017, 10:10 pm
Download App from Playstore: