ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ......?
ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ..........?
ನೀನು ನನ್ನೆಡೆ ನೋಡಿ
ನಿನ್ನ ಕಂಗಳಲಿ
ಮೋಡಿ ಮಾಡಿ
ನಿನ್ನೆಡೆಗೆ ನನ್ನ
ಗ "ಮನ" ಸೆಳೆದ
ಆ ಮಧುರ ಕ್ಷಣಗಳನ್ನ...........?
ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ...........?
ಇಳಿ ಸಂಜೆಯ ಹೊತ್ತಿನಲಿ
ಬೀಸುವ ಸುಮಧುರ
ತಂಗಾಳಿಯಂತೆ ಬಂದು
ನನ್ನೊಡಲ ಸೋಕಿದ
ಸವಿಯ ನೆನಪುಗಳನ್ನ.........?
ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ............?
ನಿನ್ನ ಬರುವಿಕೆಗಾಗಿ
ನಾನು ಕಾದು ಕುಳಿತ ಕ್ಷಣವ.......?
ಯಾರಲ್ಲಿ ಹೇಳಿಕೊಳ್ಳಲಾಗದೇ
ಅನುಭವಿಸಿದ ಸಂಕಟವ........?
ಮತ್ತೆ ಮತ್ತೆ ಹೇಗೆ ಬರೆಯಲಿ
ನೀನೇ ಹೇಳು ಗೆಳತಿ...............?
ನನ್ನೆದೆಯು ನಿನ್ನ ನೆನಪಿಗೆ
ಮಿಡಿಯುತಿದೆಯೋ........?
ಅಥವಾ
ಕೊರಗುತಿದಿಯೋ.........?
ಒಂದೂ ಅರ್ಥವಾಗದ ಚಡಪಡಿಕೆಯಾ........?
ಏನೆಂದು ಸಮಾಧಾನಿಸಲಿ
ನೀನೇ ಹೇಳು ಗೆಳತಿ.........?
ಎದೆಯಲ್ಲಿ ಜಾಗವಿದ್ದರು
ಎದುರಲ್ಲಿ ನಿಲ್ಲಲಾಗದ.........?
ಎದುರಿಗಿದ್ದರು ಕೈ ಸನ್ನೆಯಲಿ
ಮಾತನಾಡುವ ಈ ಮನಸಿನ
ಮೂಕ ರೋದನವ..........?
ಹೇಗೆಂದು ಕಟ್ಟಿ ಹಾಕುವುದು
ನೀನೇ ಹೇಳು ಗೆಳತಿ..........?
ಮರೆಯಲಾಗದ ನಿನ್ನ
ಸವಿ-ನೆನಪುಗಳ ಸೆಳೆತವನ್ನ…........!
ಕೊಲ್ಲಲಾಗದ ನನ್ನ
ಕನಸುಗಳ ಮಿಡಿತವನ್ನ...............?
ಏನೆಂದು ಅರ್ಥೈಸಲಿ
ನೀನೇ ಹೇಳು ಗೆಳತಿ..........?
ಮರೆತರು ಕಣ್ಣ ಮುಂದೆಯೇ
ಬರುವ ಈ ನಿನ್ನ ಮುಖವನ್ನ.............?
ಪದೇ ಪದೇ ನಿನ್ನನೇ ನೆನಪಿಸಿ ನೆನಪಿಸಿ
ಕಾಡೋ ಈ ವಿರಹವನ್ನ........?
ಮನಸ್ಸಿನ ಮಾತುಗಳು
ಇಷ್ಟೆಲ್ಲಾ ಇದ್ದರು
ಯಾರಲ್ಲೂ
ಹೇಳಿಕೊಳ್ಳಲಾಗದೆ ನಾನು
ಅಲೇಮಾರಿಯಂತೆ
ಅಲೆದಾಡುವಾಗ..........!
ನಿನ್ನ ನೆನಪೇಂಬ
ತುಂತುರು ಮಳೆಯ
ಸೋನೆ ಸುರಿದು
ಪದಗಳ ಅಲೆಗಳಾಗಿ
ಭೋರ್ಗರೆದು ಧುಮ್ಮಿಕ್ಕಿ
ಹರಿಯುತಿದೆ ನೋಡು ಗೆಳತಿ
ನನ್ನೊ (ಲವಿನ) ಡಲ ಕಣಿವೆಯಲಿ…....
ಪ್ರೀತಿಯಿಂದ..
ವಿಜಯಾನಂದ..
9741940305
- ವಿಜಯಾನಂದ
13 Jul 2017, 10:00 am
Download App from Playstore: