ವಿರಹ ಗೀತೆ

ಮನದಾಳದಲ್ಲಿ ಇಂದು
ನಿನ್ನದೇ ಸವಿ ನೆನಪುಗಳು
ಮಿಡಿಯುವ ‌‌‌‌ಹೃದಯದ ಒಳಗೆ
ಮೋಹದ ಸವಿ ಕನಸುಗಳು
ದೂರದಿ ಏತಕೆ ಕುಳಿತು ನನ್ನನ್ನು ಕಾಡುವೆ
ಸನಿಹದಿ ನೀ ಬಂದು ನನ್ನ ಮೊಗವ ಮುದ್ದಿಸಬಾರದೆ
ಪಿಸುಗುಡುವ ಏಕಾಂತವೇ ಮೌನ


ನೀರೆ ಇಲ್ಲದ ನದಿಯು
ಸುಳಿಯಾಗಿ ತಿರುಗಬಹುದೆ
ಮೋಡವೆ ಇರದ ಗಗನ
ಮಳೆಯನ್ನು ಸುರಿಸಬಹುದೆ
ಬರಗಾಲ ಇರುವ ಭೂಮಿ
ಹಸಿರಾಗಿ ಕಂಪಿಸಬಹುದೆ
ಜೀವವೆ ಹೀರಿದ ಹೃದಯ
ಖುಷಿಯಿಂದ ನಲಿಯಬಹುದೆ
ಪ್ರೀತಿಯನ್ನು ಆಶ್ರಯಿಸು ಓ ಮನವೆ


ವಿರಹದ ಗೀತೆಯನ್ನು
ರಾಗವಾಗಿ ಹಾಡಬಹುದೆ
ಕಪ್ಪು ಎಂಬ ವರ್ಣದಲ್ಲಿ
ಚಿತ್ರವನ್ನು ಬಣ್ಣಿಸಬಹುದೆ
ಸುಗಂಧವಿರದ ಲತೆಗೆ
ಹೂವೆಂದು ಕರೆಯಬಹುದೆ
ಒಲುಮೆಯೆ ಇಲ್ಲದ ಜೀವಕೆ
ಬದುಕೆಂದೆನ್ನಬಹುದೆ
ಪ್ರೀತಿಗೆ ಒಪ್ಪಿಕೋ ಓ ಒಲವೆ

- Jayanthi

13 Jul 2017, 04:20 pm
Download App from Playstore: