ಬನವ ನುಂಗಿದ ನಗರಗಳು
ಆಲಿಸು ಬಾ ಓ ನನ್ನ ಸಖಿ
ಹಕ್ಕಿಗಳ ಇಂಜರವ ! ನುಂಗಿದ
ಅಭಿವ್ಯಕ್ತಿಯ ಕರ್ಕಶ ಧ್ವನಿಯ
ನೋಡುವ ಬಾ ಓ ನನ್ನ ಸಖಿ
ಹಚ್ಚ ಹಸುರಿನ ಸೊಬಗನು! ನುಂಗಿದ
ಪಾಷಾಣದಿ ತುಂಬಿರುವ ನಗರವ
ಓ ನನ್ನ ಸಖಿ ನೋಡು ಬಾರೆ
ಮಾನವತೆ ತೊರೆದ! ಮನುಜರ
ದಾಸ್ಯದ ಬಂಡ ಬದುಕ
ಓ ಸಖಿ ನೋಡು ಬಾರೆ
ನಡೆ- ನುಡಿ ಇಲ್ಲದ ! ಮಾನವೀಯತೆ
ತೊರೆದಿರುವ ಮನುಜರ
ಓ ಸಖಿ ನೋಡು ಬಾರೆ
ಮೃಗ- ಪಕ್ಷಿಗಳ ತಾಣವ! ನುಂಗಿ
ಮೃಗಗಳಂತಿಹ ಮಾನವರ
ಓ ಸಖಿ ನೋಡು ಬಾರೆ
ಉಳ್ಳವರ ಅಟ್ಟಹಾಸಕ್ಕೆ! ಸಿಲುಕಿ
ನಾಶವಾಗಿಹ ವನ್ಯತಾಣವ
ಶಾರಧ
- ಶಕುಂತಲಾ
13 Jul 2017, 05:13 pm
Download App from Playstore: