ಮನಸು ಕೇಳುತ್ತಿರುವ ಪ್ರಶ್ನೆಗಳು............
ನನ್ನ ಮನಸು ಮತ್ತೆ ಮತ್ತೆ ನನ್ನನ್ನೇ ಪ್ರಶ್ನಿಸುತ್ತಿದೆ ಯಾಕೆ ನಿನ್ನ ತಪ್ಪಿಲ್ಲವೆಂದು ತಿಳಿದು ಕ್ಷಮೆಕೇಳುತ್ತಿರುವೆ ಎಂದೂ.............
ಉತ್ತರಿಸಲಾಗುತ್ತಿಲ್ಲ ನನಗೆ ನನ್ನ ಮನಸು
ಕೇಳುವ ಪ್ರಶ್ನೆಗಳಿಗೆ................
ತಿಳಿದಿಲ್ಲ ಇಂದಿಗೂ ನನಗೆ ನನ್ನ ಮನದ ನೋವು ಅಳೆಯುವ ಸಾಧನ ನನ್ನ ಕಣ್ಣಿರೆಂದು.........
ಸ್ವಾತಂತ್ರ್ಯ ಸ್ವಾತಂತ್ರ್ಯ ನನ್ನ ಮನಸು ಪ್ರತಿನಿತ್ಯ ಬೇಡುವ ಹಕ್ಕು ಎಷ್ಟು ಅದನ್ನು ಪಡಿಯೋಣವೆಂದು ಹೊರಟರು ಮತ್ತೆ ಕಂಬಿಗಳಿಲ್ಲದ ಬಂಧನದ ಕೈಯಲ್ಲಿ ಬಂದಿಯಾಗಿ ಹೋಗುತ್ತಿರುವೆ....................
ಇರುವ ಒಂದು ಜೀವನ ನನಗಾಗಿ ನಾನಿರುವ ಬದಲಾಗಿ ಎಲ್ಲರಿಗಾಗಿ ನಾನಿದ್ದು ನನ್ನಲ್ಲೇ ಕೊರಗುತ್ತಿರುವೆ ಕಣ್ಣಿರಲ್ಲಿ ಕರಗುತ್ತಿರುವೆ.........
ಪ್ರೀತಿಯೆoಬ ಮಾಯೆಯ ಕೈಸೇರದೆ ತಪ್ಪಿಸಿಕೊಳ್ಳುವ ಬದಲಾಗಿ ನೋವೆಂದು
ತಿಳಿದೊಡನೆ ಮತ್ತೆ ನನ್ನವರ ಕಣ್ಣಲ್ಲಿ ನಿರಾಗಲು ಹೊರಡುವೆ.....................
- ಚುಕ್ಕಿ
13 Jul 2017, 06:58 pm
Download App from Playstore: