ನೆನಪು

ನಿನ್ನ ಮರೆಯುತ್ತಾರೆ ಯಾರು?
ಹಾಗೆ ಆಗದು ಎಂದೂ
ನನ್ನ ಹೃದಯ ಒಪ್ಪದು
ಒಂದು ಮಧುರ ಪರಿಮಳ
ನಡು ದಾರಿಯಲ್ಲಿ ಬಿಡುವುದು
ದೂರ ಸರಿದು ಹೋಗುವುದು
ಮನಸ್ಸಿಗೆ ಹಿತವೇ?
ನೂರಾರು ಯಾಕೆ ಸಾವಿರಾರು
ನೆನಪುಗಳು ಹೃದಯ ತುಂಬಿ
ಅಕ್ಷಯಪಾತ್ರೆಯಂತೆ ಎಂದೂ
ಮುಗಿಯದು ಖಾಲಿಯಾಗದು..

- ಕರಣ್ ಗಾವಡಾ

13 Jul 2017, 07:19 pm
Download App from Playstore: