ಒಲವೆಂಬ ಮಕರಂದ...

ಮನಸಿನ ತಾಳಕೆ
ಪ್ರೀತಿಯ ರಾಗಕೆ
ಸ್ವರವಾಗಿ ಮಿಡಿದಿದೆ
ಈ ನನ್ನ ಹೃದಯ.....!

ನಾ ಬಂದೇ ದುಂಬಿಯಾಗಿ
ಒಲವಿನ ಮಕರಂದ ಹೀರಲು...
ಈ ಹೂವಿನ ಪರಾಗಸ್ಪರ್ಶಕೆ
ನನ್ನೇ ನಾ ಮರೆತೆ ಹಾರಲು...!

ನಿನ್ನ ನೋಡುತಲಿ
ಬಯಕೆಗೆ ಜಾರುತಲಿ
ಸವಿ ಚುಂಬನವ ನೀಡುತಲಿ
ನಾ ಮರೆತೇನೆಲ್ಲಾ ಜಗವಾ...!

ಮೋಹವೋ ನಾ ಕಾಣೆ
ದಾಹವೋ ನಾ ಕಾಣೆ
ನಿನ್ನೊಲವಾ ನಾನೆಂದಿಗೂ
ಮರೆಯಲಾರೆ ಜಾಣೆ....!

ಪ್ರೇಮವೋ ನಾ ಕಾಣೆ
ಕಾಮವೋ ನಾ ಕಾಣೆ
ಸರಸದಲಿ ಮಿಂದೆವು
ಸವಿ ಮಿಲನದಿ ಬೆಂದೆವು....

ಸಂಭ್ರಮದಿ ಬೆರೆತೆವು
ಸರಸ-ಸಲ್ಲಾಪದಿ ಮರೆತವು
ಪ್ರತಿ ದಿನಾ-ದಿನಾನೆ
ಆ ರತಿ-ಮನ್ಮತರೂ ನಾಚುವಂತೆ...

ಬಹುಶಃ ಅವರಿಗೂ ನಮ್ಮ ನೋಡಿ
"ಅಸೂಯೆ" ಬಂದಿರಬೇಕು......!
ಅದಕ್ಕಾಗಿಯೇ ಹಾಕಿರಬಹುದೇ
ನಮ್ಮ " ಪ್ರೀತಿಗೆ " ಕಡಿವಾಣ....?

ಪ್ರೀತಿಯಲಿ ನೊಂದ ಹುಡುಗ...
ವಿಜಯಾನಂದ..
9741940305

- ವಿಜಯಾನಂದ

14 Jul 2017, 08:03 am
Download App from Playstore: