ಅಗಲಿಕೆ

ನಿಮ್ಮ ಅಗಲಿಕೆಯ ನೋವು ಕಾಡುತಿದೆ,,
ಕಷ್ಟಗಳೇನೆಂದು ಅರಿಯದ ನನ್ನ ನೋವಿನ ಸಾಗರದಲಿ ಮುಳುಗಿಸಿದೆ,,,

ನನ್ನ ಜೊತೆ ನೆಡೆದಂತೆ ಆಜು-ಬಾಜು
ಬಿಟ್ಟರು ಬಿಡದಂತಹ ಈ ಗೋಜು

ಬೆಂಕಿ ಮಳೆಯಲಿ ತೊಯ್ದನಂತಹ ಅನುಭವ
ಈ ಮಳೆಗೆ ಒಬ್ಬಂಟಿಯಾಗಿದೆ ನೀವೇ ನೀಡಿದ ಈ ಜೀವ
ವರುಷಗಳು ಉರುಳಿದವು
ನೀವೆಲ್ಲದೆ ಅದೆಷ್ಟೋ ಹರುಷಗಳ ಕಳೆದೆವು

ಆದರೂ ನೀವು ನೀಡಿದ ನಂಬಿಕೆಯ ಸಸ್ಯ
ಬೆಳೆಯುತ್ತಿದೆ
ಆಗೊಮ್ಮೆ ಈಗೊಮ್ಮೆ ಸುರಿಯುವ
ನಿಮ್ಮ ನೆನಪಿನ ಮಳೆಯಲ್ಲಿ ಹಸನಾಗಿದೆ
ಹೆಮ್ಮರವಾಗುವತ್ತ ಯೋಚಿಸುತಿದೆ

- pavan

15 Jul 2017, 09:17 am
Download App from Playstore: