ಹೆಜ್ಜೆಯ ಗುರುತು
ಮನದ ದಾರಿಯಲ್ಲಿ
ನೀ ಬಂದು ಹೋದ ಮೇಲೆ
ನೆನಪಾಗಿ ಉಳಿದಿರುವುದೇ
ನೀ ನಡೆದ ಹೆಜ್ಜೆಯ ಗುರುತು!!
ಅದು ಅಳಿಸದೇ
ಹಾಗೆಯೇ ಉಳಿದು ಹೋಗಿದೆ
ನೀ ಹಿಂದಿರುಗಿ
ಬಾರದಿರುವುದನ್ನು ಅರಿತು!!
ಇಂದು ಈ ಮನದ ದಾರಿಯಲ್ಲಿ
ಶುರುವಾದ ಬಿರುಗಾಳಿ
ಶಾಂತವಾಗುವ ಮುನ್ನ
ಅಳಿಸಲಿ ನಿನ್ನ ನೆನಪಿನ ಗುರುತ!!
- ಪಿ.ಜಿ.ಜ್ಯೋತಿ
15 Jul 2017, 08:02 pm
Download App from Playstore: