ಬೆಂಕಿ ಹಚ್ಚುವವರು

ತನ್ನ ಬಲವಾದ
ಏಟಿಗೆ
ಬಲಿಯಾದವನ್ಯಾರೆಂದು
ಪಾಪ
ತಲವಾರಿಗೆ ಗೊತ್ತಿಲ್ಲ...
ಆದರೆ ತನ್ನನ್ನು
ಕ್ರೌರ್ಯಕ್ಕೆ
ಬಳಸಿದ ಕಟುಕನ
ಮೇಲೆ ಕೋಪವಿದೆ ...

ತಾನು ಯಾಕೆ
ಕೊಂದೆನೆಂಬುದು
ಕೊಲೆಗೆಡುಕನಿಗೆ
ಗೊತ್ತಿಲ್ಲ
ಕಷ್ಟದಲ್ಲಿದ್ದವರನ್ನು
ಮತ್ತಷ್ಟು ಕಷ್ಟಕ್ಕೆ
ನೂಕಿ ಜೈಲು
ಪಾಲಾದವನಿಗೆ
ಕುಟುಂಬದವರ
ಶಾಪವಿದೆ..

ತನ್ನಷ್ಟಕ್ಕೆ ಇದ್ದ
ತನ್ನನ್ನು ಯಾಕೆ
ಕೊಂದರೆಂದು
ಬಲಿಯಾದವನಿಗೂ
ಗೊತ್ತಿಲ್ಲ
ಹೆತ್ತ ಕರುಳ
ಉಸಿರು ನಿಲ್ಲುವವರೆಗೂ
ಶಾಶ್ವತವಾದ
ನೋವಿದೆ...

ಕೊಂದವನು
ಎರಡು ಕುಟುಂಬವನ್ನು
ನೋವಿನ ಕಡಲಿಗೆ
ನೂಕಿ, ಜೈಲಿಗೆ ಹೋಗಿ
ಸಾಧಿಸಿದಾದರೂ
ಏನು ???

ಹೆತ್ತವರ ನೋವಿನ
ಲಾಭ ಪಡೆದವರು
ನಾಡಿಗೆ ಬೆಂಕಿ
ಹಚ್ಚುವವರ
ಹುಡುಕಾಟದಲ್ಲಿ
ತೆರೆಮರೆಯಲ್ಲಿ
ಹೊಂಚು ಹಾಕುತ್ತಿದ್ದಾರೆ
ಸಾಯುವವನಿಗಾಗಿ
ಜೈಲಿಗೆ
ಹೋಗುವವನಿಗಾಗಿ.

- ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

15 Jul 2017, 11:45 pm
Download App from Playstore: