ಸಾಲು ಕಂಬಗಳ ಹಾದಿಯಲ್ಲಿ

ಸಾಲು ಕಂಬಗಳ ಹಾದಿಯಲ್ಲಿ
ಸಾಲು ದೀಪಗಳ ನಡುವೆ ರಾತ್ರಿಯಲ್ಲಿ!!
ಏಕಾಂಗಿಯಾಗಿ ನನ್ನವಳು
ಸಾಗಿ ಬರುತಿಹಳು ನಾನು ಇರುವಲ್ಲಿ!!

ಆ ಮೋಡದ ರವಿಕೆಯನು ಹೊದ್ದು
ನೀಲ ಬಾನಿನ ಸೀರೆ‌ ಮೈಗೆ ಸುತ್ತಿಸಿಕೊಂಡು!!
ತಾರೆಗಳ ಒಡವೆಯ ಮಣಭಾರ ಹೇರಿಕೊಂಡು
ಬೀಗುತಲೇ ನನ್ನೆಡೆಗೆ ಸಾಗಿ ಬಂದಿಹಳು!!

ಚಂದ್ರನ‌ನೇ ಹಣೆಬೊಟ್ಟಾಗಿಸಿ ನಗುನಗುತಲೇ
ಬೆಳದಿಂಗಳ ತಾ ಹೊತ್ತು ತಂದಿಹಳು!!
ನೈದಿಲೆಯ ನಾಚಿಕೆಯು ತುಂಬಿರುವ ಕಣ್ಣುಗಳು
ಅನುರಾಗದಿಂದ ನನ್ನ ಬಾ ಎಂದು ಕರೆದಿಹವು!!

ಆ ಮದನ ಕನ್ನಿಕೆಗೆ ಶರಣಾಗಿ ನಿಂತಿರುವೆ
ವಲಿದು ಬಂದವಳ ನಾ ದೂರಲಾರದೇ!!
ಭಾವದಲಿ ಮೈ ಮರೆತು ಬೆಸೆದುಕೊಂಡಿಹ
ಒಲವು ಬೆರೆತು ಹೋಯಿತು ಈ ಬದುಕಿನೊಡನೆ!!

- ಪಿ.ಜಿ.ಜ್ಯೋತಿ

17 Jul 2017, 09:45 am
Download App from Playstore: