ಹಸಿವು

ಹಸಿವು ಎಂಬ ಕ್ರೂರ ಮೃಗವು
ನನ್ನನ್ನು ಬೇಟೆಯಾಡಿ ಕಿತ್ತು ತಿನ್ನುವಾಗ
ನಾ ಹೇಗೆ ಯೋಚಿಸಲಿ ಹೇಳು
ನೆನೆದು ಬೇರೆ ಭಾಗ್ಯದ ಯೋಗವ!!

ಧೂಳು ಕಣಗಳು ಗಾಳಿಯಲ್ಲಿ ಬೆರೆತು
ಆಹಾರವಾಗಿ ನನ್ನ ಉದರ ಸೇರಬಾರದೇ
ಸೇರಿ ತೀರಿಸಬಾರದೇ ನನಗೆ ಅಂಟಿರುವ
ಈ ಹಸಿವಿನ ರಣ ಬಾಧೆಯನು!!

ತುತ್ತು ಅನ್ನದ ಋಣವು ಎತ್ತ ಹೋಯಿತು ಕಾಣೆ
ಅರಿವು ಮೂಡಿಸಿತೇ ಆ ನೆತ್ತಿ ಸುಡುವ ಬಿಸಿಲು
ಯಾವ ಬೇಧವ ನಾ ಮಾಡಿ ತೀರಲಿ ಹೇಳು
ನೆನೆದಾಗ ಕಡು ಶಾಪ ಬಂದು ನನ್ನ ಕಾಡಿತೇ!!

- ಪಿ.ಜಿ.ಜ್ಯೋತಿ

17 Jul 2017, 11:18 am
Download App from Playstore: