ಬೆಳಕ ತಾ ನೇಸರ
ಯಾಕಾಗಿ ಇರುಳ
ತಂದೆ ನೀ ಓ ನೇಸರ!!
ಯಾಕಾಗಿ ಬಂತು ನನಗೆ
ಇಂದು ಈ ಬೇಸರ!!
ಈ ಇರುಳಿನ ಏಕಾಂತಕೆ
ನಾನೇತಕೆ ಮಣೆ ಹಾಕಿದೆ!!
ಅವನಿಲ್ಲದ ಈ ಇರುಳಿನ
ಅರಿವೇತಕೆ ಹೀಗಾಗಿದೆ!!
ಸುಡು ಬಿಸಿಲಿನ ಉರಿ ತಾಪವು
ಹಿತ ನೀಡಿತೇ ಈ ಮನಸಿಗೆ!!
ಈ ಇರುಳಿನ ಸಂತಾಪವು
ನನ್ನ ಜಡವಾಗಿಸಿ ನಗುವಂತಿದೆ!!
ಇರುಳಲ್ಲಿ ವಿರಹ ಗೀತೆ
ಮನದಲ್ಲಿ ಮನೆ ಮಾಡಿ!!
ಸಾಕಾಯಿತು ಈ ಇರುಳ
ನೋವನ್ನು ಕೊನೆ ಮಾಡು!!
ಓ ನೇಸರ ನೀ ಬೇಗ ಬಾರ
ಇರುಳನು ಸರಿಸಿ ಬೆಳಕ ತಾರ!!
ಅಂಧಕಾರದ ಬದುಕ ನೀನು
ಅಂದವಾಗಿಸು ಬೇಗ ಬಾರ!!
- ಪಿ.ಜಿ.ಜ್ಯೋತಿ
17 Jul 2017, 12:21 pm
Download App from Playstore: