ಆಕರ್ಷಣೆ
ನಿನ್ನ್ ಅನುಮತಿ ಇಲ್ಲದೆ ಪ್ರೀತಿಸಿದ ನನ್ನ ಕ್ಷಮಿಸು
ಹುಸಿಮುನಿಸಿನ ನಿನ್ನ ಮೊಗ ಚೆಲುವೆ ಸೊಗಸು
ಬಡಪಾಯಿಯ ತೊಳಲಾಟಕೆ ನಿನಗಿಲ್ಲವೇ ಕರುಣೆ
ಬಿಟ್ಟರು ಬಿಡದೆ ಕಾಡುತಿಹುದು
ನಿನ ನೆನಪು ತರುಣೆ
ಈ ಪ್ರೀತಿ ಪರಿಪಾಟು ನನಗಂತೂ ಅತಿ ಹೊಸದು
ಸಾಕಾಗಿದೆ ನನಗೀಗ ಕನಸಲಿ
ಒಬ್ಬನೇ ಅಲೆದು
ಜೊತೆಯಾಗು ನಿ ನನಗೆ
ಬೇರೇನು ಬೇಡೇನಗೆ
ಈಗಂತೂ ಚಂದಿರನ ಮೊಗದಲೂ ಕಾಣುತಿದೆ
ನಿನ್ನ ಪ್ರತಿಬಿಂಬ
ಪ್ರೀತಿಯ ನೆಪದಲ್ಲಿ
ಕಾಡುತಿಹೆ ನೀ ತುಂಬಾ
- pavan
17 Jul 2017, 07:22 pm
Download App from Playstore: